ಡಿಗ್ರಿ ಮುಗಿಸಿ ಕೆಲಸಕ್ಕೆ ಅಲೆದಾಡುವ ಯುವಕ ಯುವತಿಯರಿಗೆ ಈಗ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ ಇದೆ. SSC CGL 17 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯವಿದೆ.
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ 2024:- ಕೇಂದ್ರ ಸರ್ಕಾರದ ಅಡಿಯಲ್ಲಿ ಹುದ್ದೆಗಳ ನೇಮಕಾತಿಗೆ ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ 2024 ರ ಅಧಿಸೂಚನೆ ಪ್ರಕಟ ಆಗಿದೇ ಹುದ್ದೆಗಳ ನೇಮಕಾತಿಯನ್ನು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳು ಹಾಗೂ ಸಂಸ್ಥೆಗಳು ಖಾಲಿ ಇರುವ ಹುದ್ದೆಗಳನ ಭರ್ತಿ ಮಾಡಲಿದೆ.
ಪ್ರಮುಖ ದಿನಾಂಕ :-
- ಎಸ್‌ಎಸ್‌ಸಿ ಸಿಜಿಎಲ್ ಅಪ್ಲಿಕೇಶನ್ ಹಾಕಲು ಇಲಾಖೆ ತಿಳಿಸಿದೆ ಕೊನೆ ದಿನಾಂಕ :- ಜುಲೈ 24 2024ರ ಮಧ್ಯರಾತ್ರಿ 12 ಗಂಟೆ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕವು :- ಜುಲೈ 25 2024ರ ಮಧ್ಯರಾತ್ರಿ 12 ಗಂಟೆ.
- ಅಪ್ಲಿಕೇಶನ್ ನಲ್ಲಿ ಸಲ್ಲಿಸಿದ ಮಾಹಿತಿ ತಿದ್ದುಪಡಿಗೆ ಲಿಂಕ್ ಓಪನ್ ಆಗುವ ದಿನಾಂಕವು :-ಆಗಸ್ಟ್ 10 2024 ರಿಂದ ಆಗಸ್ಟ್ 11 2024ರ ಮಧ್ಯರಾತ್ರಿ 11 ಗಂಟೆಯ ತನಕ.
- ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -1 ಸಿಬಿಟಿ ಪರೀಕ್ಷೆಯ ಸಂಭಾವ್ಯ ದಿನಾಂಕ :- ಸಪ್ಟೆಂಬರ್ 2024 ಅಥವಾ ಅಕ್ಟೋಬರ್ 2024.
- ಎಸ್‌ಎಸ್‌ಸಿ ಸಿಜಿಎಲ್ ಟೈಯರ್ -2 ಸಿಬಿಟಿ ಪರೀಕ್ಷೆಯ ಸಂಭಾವ್ಯ ದಿನಾಂಕ :- ಡಿಸೆಂಬರ್ 2024.
ಹುದ್ದೆಯ ವೇತನದ ಮಾಹಿತಿ :- ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಪೇ ಲೆವೆಲ್ 4 ರ ಪ್ರಕಾರವಾಗಿ ನೀಡುವ ವೇತನದ ಮೊತ್ತವು 25,500 ರೂಪಾಯಿಯಿಂದ 81,100 ರೂಪಾಯಿಯ ವರೆಗೆ ಆಗಿರುತ್ತದೆ. ಹಾಗೆಯೇ ಪೇ ಲೆವೆಲ್ 7 ಪ್ರಕಾರವಾಗಿ ನೀಡುವ ವೇತನದ ಮೊತ್ತವು 44,900 ರೂಪಾಯಿಯಿದ 1,42,400 ರೂಪಾಯಿಯವರೆಗೆ ಆಗಿರುತ್ತದೆ.
ವಯಸ್ಸಿನ ಮಾಹಿತಿ :- ಪರೀಕ್ಷೆಗೆ ಕುಳಿತುಕೊಳ್ಳಲು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು 27 ರಿಂದ 32 ವರ್ಷ. ಜೊತೆಗೆ ಸರ್ಕಾರಿ ನಿಯಮದ ಪ್ರಕಾರ ಕೆಲವು ಜಾತಿ ಅಥವಾ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾತಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಹತೆ ಏನು?
ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಜೊತೆಗೆ ಆಡಿಟ್ ಆಫೀಸ್ ಹುದ್ದೆಗಳಿಗೆ ಸಿಎ ಅಥವಾ ಎಂಬಿಎ ಅಥವಾ ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟಂಟ್ ಅಥವಾ ಮಾಸ್ಟರ್ ಇನ್ ಕಾಮರ್ಸ್ ಅಥವಾ ಮಾಸ್ಟರ್ ಇನ್ ಬ್ಯುಸಿನೆಸ್ ಸ್ಟಡೀಸ್ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಧಿಕೃತ ವೆಬ್ಸೈಟ್ ವಿಳಾಸ :- https://ssc.gov.in/ . ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ Combined Graduate Level Examination 2024 ಎಂಬ ಆಪ್ಷನ್ ಆಯ್ಕೆ ಮಾಡಿ. ನಂತರ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ರಿಜಿಸ್ಟರ್ ಆಗಿ. ಈ ಹಿಂದೆ ರಿಜಿಸ್ಟರ್ ಆಗಿದ್ದಾರೆ ಲಾಗ್ ಇನ್ ಆಗಿ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಂತರ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ತುಂಬಿ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್‌ನಲ್ಲಿ 91 ಖಾಲಿ ಹುದ್ದೆಗಳು ಇವೆ. ಈಗಲೇ ಅರ್ಜಿ ಹಾಕಿ..
ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ ಬರೋಬ್ಬರಿ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ..