ಅಂಗನವಾಡಿ ಮಕ್ಕಳು ಈಗ ಎಲ್ಲ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಕ್ಕಳ ಹಾಗೆಯೇ ಯೂನಿಫಾರ್ಮ್ ಹಾಗೂ ಬ್ಯಾಗ್ ಹಿಡಿದು ಶಾಲೆಗೆ ಹೋಗುವ ದಿನಗಳು ಬರುತ್ತಿವೆ. ಇಷ್ಟು ವರುಷಗಳ ವರೆಗೆ ಸರಕಾರಿ ಅಂಗನವಾಡಿ ಕೇಂದ್ರದಲ್ಲಿ ಕಲಿಯುವ ಮಕ್ಕಳು ಅವ್ರಿಗೆ ಇಷ್ಟ ಬಂದ ಬಟ್ಟೆಯನ್ನು ಹಾಕಿಕೊಂಡು ಶಾಲೆಗೆ ಬರುತ್ತಿದ್ದರು. ಆದರೆ ಈಗ ಅಂಗನವಾಡಿ ಕೇಂದ್ರದಲ್ಲಿ lkg, ukg ತರಗತಿಗಳು ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಂತೆಯೇ ಇರಲಿವೆ. ಆದ ಕಾರಣಕ್ಕೆ ಸರ್ಕಾರವು ಮಕ್ಕಳಿಗೆ ಯೂನಿಫಾರ್ಮ್ ಹಾಗೂ ಬಾಗ್ ವಿತರಣೆ ಮಾಡಲಿದೆ.
ಸರ್ಕಾರಕ್ಕೆ ಮನವಿ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರು:- ಈಗಾಗ್ಲೇ ತಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಪ್ರತಿಭಟನೆ ನಡೆಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಈಗ ಮತ್ತೆ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 2024-25 ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ lkg ukg ತರಗತಿಗಳು ಆರಂಭ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು. ಬೇಡಿಕೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಕಾಯಕಿಯರ ಫೆಡರೇಶನ್ ನೀಡಿದ ಮನವಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಹೀಗಿದೆ:- ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಕಾಯಕಿಯರ ಫೆಡರೇಶನ್ ಅವರ ಮನವಿಯನ್ನು ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಮ್ಮ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಸರಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಬೇಡಿಕೆ ಪೂರೈಸಲಾಗುವುದು ಎಂದು ತಿಳಿಸಿದರು ಅದರ ಜೊತೆ ಶೀಘ್ರದಲ್ಲಿಯೇ ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಂತ ಮನೆಯ ಕನಸು ಕಂಡವರಿಗೆ ಗುಡ್ ನ್ಯೂಸ್; ವಿವಿಧ ವಸತಿ ಯೋಜನೆಯಡಿ 1.30 ಲಕ್ಷ ಮನೆ ನಿರ್ಮಾಣ.
ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ:-
ಎಲ್ಲ ಮಕ್ಕಳಂತೆಯೇ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೂ ಉನ್ನತ ಶಿಕ್ಷಣ ನೀಡಬೇಕು. ಅವರು ಸಹ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಬೇಕು ಜೊತೆಗೆ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಅನಿವಾರ್ಯತೆ ಎದುರಾಗಿರುವುದುರಿಂದ ಈಗ ಹೊಸದಾಗಿ ಅಂಗನವಾಡಿಗೆ lkg ಮತ್ತೂ ukg ಶಿಕ್ಷಣ ತರಲಾಗಿದೆ. ಇದು ಸಾಮಾಜಿಕವಾಗಿ ಎಲ್ಲರೊಡನೆ ಬೇರೆಯುವುದರ ಜೊತೆಗೆ ಇನ್ನಷ್ಟು ಹೆಚ್ಚಿನ ಮಕ್ಕಳು ಸರಕಾರಿ ಶಾಲೆಗಳತ್ತ ಮುಖ ಎಂಬ ದೃಷ್ಟಿಯಿಂದ ಈಗ ಈ ಬದಲಾವಣೆಯನ್ನು ತರಲಾಗಿದೆ.
ಶಿಕ್ಷಕರಿಗೆ ಅಭಯ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ :- lkg, ukg ತರಗತಿಗಳು ಆರಂಭ ಆದರೆ ಈಗಿರುವ ಕಾರ್ಯಕರ್ತರನ್ನು ತೆಗೆದು ಹಾಕಿ ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅಥವಾ ಕನ್ನಡ ಶಾಲೆಗೆ ವಿಲೀನ ಗೋಳಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದು ಸುಳ್ಳು ಸುದ್ದಿಯಾಗಿದೆ. ನಾವು ಅಂಗನವಾಡಿ ಕಾರ್ಯಕರ್ತರನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಅವರನ್ನು ಯಾವುದೇ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗುವುದಿಲ್ಲ. ಈ ಹಿಂದಿನಂತೆಯೇ ಅವರು ಕೆಲಸ ಮಾಡುತ್ತಾರೆ. ಕೇವಲ ಐದು ಶೈಕ್ಷಣಿಕ ಬದಲಾವಣೆ ಅಷ್ಟೇ. ಮಕ್ಕಳಿಗೆ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ ಎಂಬ ಮಾತನ್ನು ಹೇಳಿದರು. ಈ ಹೊಸ ನಿಯಮಗಳಿದ ಅಥವಾ ಯೋಜನೆಯಿಂದ ಯಾವುದೇ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ತೊಂದರೆ ಉಂಟಾಗುವುದಿಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸಿದರು.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಇದರಿಂದ ತಿಂಗಳಿಗೆ 20,000 ರೂಪಾಯಿ ಪೆನ್ಷನ್ ಪಡೆಯಿರಿ