ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎಂದೇ ಕೇಂದ್ರ ಸರ್ಕಾರವು ಆರಂಭ ಮಾಡಿರುವ ಯೋಜನೆ ಸುಕನ್ಯಾ ಸಮೃದ್ಧಿ. ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಬದುಕು ನಡೆಸಬೇಕು. ಅವರ ಶೈಕ್ಷಣಿಕ ಬದುಕು ಹಾಗೂ ಅವರ ವೃತ್ತಿ ಜೀವನ ಹೀಗೆ ಅವರ ಬದುಕಿನ ಸವಾಲುಗಳಿಗೆ ಆರ್ಥಿಕವಾಗಿ ನೆರವಾಗಬೇಕು. ಹಾಗೂ ಹೆಣ್ಣು ಮಕ್ಕಳು ಬೇರೆಯವರ ಮೇಲೆ ಡಿಪೆಂಡ್ ಆಗಿ ಬದುಕಬಾರದು ಎಂಬ ದೃಷ್ಟಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಇದರಲ್ಲಿ ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿ 55 ಲಕ್ಷ ರೂಪಾಯಿ ಪಡೆಯಿರಿ.
ಒಂದು ವರ್ಷದ ಮಗುವಿಗೆ ಹೂಡಿಕೆ ಮಾಡಬಹುದು :- ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಒಂದು ವರ್ಷದಿಂದ ಮಗುವಿನ ಭವಿಷ್ಯಕ್ಕೆ ತಂದೆ ತಾಯಿ ಹೂಡಿಕೆ ಮಾಡಬಹುದಾಗಿದೆ. ತಮ್ಮ ಮಗಳ ಮುಂದಿನ ಭವಿಷ್ಯಕ್ಕೆ ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ. ಆದರೆ ಎಲ್ಲಾ ಕಡೆಯಲ್ಲಿ ಹೂಡಿಕೆ ಮಾಡಿದರೆ ಹಣದ ಭದ್ರತೆ ಇರುವುದಿಲ್ಲ. ಆದರೆ ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವುದರಿಂದ ನಿಮ್ಮ ಹೂಡಿಕೆಯ ಹಣ ಭದ್ರವಾಗಿ ಇರುತ್ತದೆ.
ಎಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು?
ಒಂದು ಮಗುವಿಗೆ ಈ ಯೋಜನೆಯ ಅಡಿಯಲ್ಲಿ ಒಂದು ಖಾತೆ ತೆರೆಯುವ ಅವಕಾಶ ಇರುತ್ತದೆ. ಕನಿಷ್ಠ ಎಂದರೆ ವಾರ್ಷಿಕವಾಗಿ 250 ರೂಪಾಯಿಗಳ ಹೂಡಿಕೆ ಮಾಡಬಹುದು. ಹಾಗೆಯೇ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡುವ ಅವಕಾಶ ಇರುತ್ತದೆ. ನಿಂಗೆ ಇದರಲ್ಲಿ ತೆರಿಗೆ ಪ್ರಯೋಜನಗಳೂ ಸಹ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು ಮಾಡಿದ ಹೂಡಿಕೆಗೆ ಶೇ. 8.2 % ಬಡ್ಡಿ ದರವನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳು 18 ವರ್ಷ ತುಂಬುವವರೆಗೆ ಮಾತ್ರ ಹಣ ಹೂಡಿಕೆ ಮಾಡಲು ಅವಕಾಶ ಇರುತ್ತದೆ.
10 ಸಾವಿರ ರೂಪಾಯಿ ಹೂಡಿಕೆ ಮಾಡಿ 55 ಲಕ್ಷ ರೂಪಾಯಿ ಗಳಿಸುವುದು ಹೇಗೆ?: ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು ಸಹ 10,000 ರೂಪಾಯಿಗಳನ್ನು ನಿರಂತರವಾಗಿ ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಮೊತ್ತ ಒಟ್ಟು 18,00,000 ರೂಪಾಯಿ ಆಗಿರುತ್ತದೆ. ಶೇ. 8.2 % ರ ಬಡ್ಡಿದರದಲ್ಲಿ ನಿಮಗೆ ಸಿಗುವ ಮೊತ್ತವು 55,46,118 ರೂಪಾಯಿ ಆಗಿರುತ್ತದೆ. ಹೂಡಿಕೆಯ ಅವಧಿಯ ಬಡ್ಡಿಯು 37,46,118 ರೂಪಾಯಿ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ಯೋಜನೆಯಲ್ಲಿ ಕೇವಲ 20 ರೂಪಾಯಿ ಪಾವತಿಸಿ 20 ಲಕ್ಷ ರೂಪಾಯಿ ಪ್ರೀಮಿಯಂ ಗಳಿಸಿ.
ಯೋಜನೆಯ ಹಣ ಪಡೆಯುವುದು ಹೇಗೆ?
ನೀವು ಭಾರತೀಯ ಅಂಚೆ ಕಚೇರಿಯಲ್ಲಿ ಅಥವಾ ಯಾವುದೇ ಬ್ಯಾಂಕ್ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಈ ಯೋಜನೆ ಹಣವನ್ನು ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಬಳಿಕ ಯಾವುದೇ emergency ಎದುರಾದರೆ ಅಂದರೆ ಶಿಕ್ಷಣ ಅಥವಾ ವೈದ್ಯಕೀಯ ಖರ್ಚು ಎದುರಾದರೆ ಹಿಂಪಡೆಯಬಹುದು. ಖಾತೆ ತೆರೆದ ದಿನದಿಂದ 21 ವರ್ಷಗಳ ಅನಂತರ ಅಥವಾ 18 ವರ್ಷಗಳನ್ನು ತಲುಪಿದ ಬಳಿಕ ಹುಡುಗಿಯ ಮದುವೆಯ ಸಮಯದಲ್ಲಿ ಖಾತೆ ಹಣವನ್ನು ಪಡೆಯಲು ಸಾಧ್ಯ..
ಇದನ್ನೂ ಓದಿ: ಸ್ವಂತ ಉದ್ಯೋಗ ಮಾಡುವವರಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಒಂದು ಲಕ್ಷ ರೂಪಾಯಿ ಸಾಲ ಸೌಲಭ್ಯ
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಂ ನಲ್ಲಿ ಬ್ಯಾಂಕ್ FD ಯೋಜನೆಗಳಿಗಿಂತ ಹೆಚ್ಚಿನ ಆದಾಯ ಗಳಿಸಿ.