ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇರುವವರಿಗೆ ರಾಜ್ಯ ಸರ್ಕಾರವು ಈಗ ಸಿಹಿ ಸುದ್ದಿಯನ್ನು ನೀಡಿದೆ. ಖಾಲಿ ಇರುವ ಸರ್ವೇಯರ್ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಈ ಲೇಖನದಲ್ಲಿ ಲಭ್ಯವಿದೆ.
ಸಚಿವ ಕೃಷ್ಣ ಬೈರೇಗೌಡ ನೀಡಿರುವ ಹೇಳಿಕೆ:- ಸರ್ವೇಯರ್ ಹುದ್ದೆಗಳು ಖಾಲಿ ಇರುವ ಕಾರಣದಿಂದ ಹಲವಾರು ಕೆಲಸಗಳು ಹಾಗೆಯೇ ಉಳಿದಿದೆ. ಜಮೀನಿನ ಪೋಡಿ ಪ್ರಕರಣಗಳು ಹಾಗೂ ದುರಸ್ತಿ ಪ್ರಕರಣವು ಹೆಚ್ಚಾಗಿದ್ದು ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇದೆ. ಇದರಿಂದ ಜನರಿಗೆ ತಮ್ಮ ಕೆಲಸಗಳು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಅದೇ ಕಾರಣಕ್ಕೆ ಈಗ ರಾಜ್ಯದಲ್ಲಿ ಇತ್ತು 737 ಸರ್ವೇಯರ್ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ:- ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹುದ್ದೆಗಳ ನೇಮಕಾತಿಗೆ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶೀಘ್ರದಲ್ಲೇ ಖಾಲಿ ಹುದ್ದೆಗಳ ನೇಮಕಾತಿ :-
ಸರ್ವೇಯರ್ ಇಲ್ಲದೆಯೇ ಹಲವು ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣದಿಂದ ಕೂಡಲೇ 737 ಸರ್ವೇಯರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳೊಡನೆ ಚರ್ಚೆ ನಡೆದಿದೆ. ನೇಮಕಾತಿಯ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಯನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಯರ್ ಹುದ್ದೆಗಳು ಬೇಕಾಗಿದೆ. ಆದರೆ ಈಗ ಮೊದಲ ಹಂತದಲ್ಲಿ ಶೀಘ್ರವಾಗಿ ಬೇಕಾಗಿರುವ ಕಡೆಗಳಲ್ಲಿ ಸರ್ವೇಯರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಭೂ ಸುರಕ್ಷಾ ಕಾರ್ಯಕ್ರಮದ ದಾಖಲೆಗಳ ಡಿಜಿಟಲೀಕರಣದ ಪ್ರಗತಿಯ ಬಗ್ಗೆ ಮಾಹಿತಿ :- ಈಗ ಎಲ್ಲ ಮಾಹಿತಿಗಳನ್ನೂ ಡಿಜಿಟಲ್ ಎಂಟ್ರಿ ಮಾಡುವ ಹಾಗೂ ಸರಳವಾಗಿ ಆನ್ಲೈನ್ ನಲ್ಲಿ ಸಿಗುವಂತೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು. ಅದರ ಪ್ರಗತಿ ಹೀಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭೂ ಸುರಕ್ಷಾ ಕಾರ್ಯಕ್ರಮದ ಡಿಜಿಟಲೀಕರಣದ ಪ್ರಗತಿ ಹೀಗಿದೆ :- ಈಗಾಗಲೇ 3.28 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ಡಿಜಿಟಲೀಕರಣ ಮಾಡಲಾಗಿದೆ. ಒಟ್ಟು 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಬರುವ ಆಗಸ್ಟ್ ತಿಂಗಳಲ್ಲಿ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸುವ ಯೋಜನೆ ಸರಕಾರ ರೂಪಿಸಿದೆ. ಇನ್ನು ಒಂದು ವರ್ಷದ ಒಳಗೆ ಡಿಜಿಟಲೀಕರಣವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ಹಾವೇರಿ ನ್ಯಾಯಾಂಗ ಘಟಕದಲ್ಲಿ SSLC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ.
ಡಿಜಿಟಲೀಕರಣ ಲಾಭಗಳು ಹೀಗಿದೆ. :-
- ಸಾರ್ವಜನಿಕರಿಗೆ ದಾಖಲೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಒದಗಿಸಲು.
- ದಾಖಲೆಗಳ ತಿರುಚುವಿಕೆ ಮತ್ತು ನಾಪತ್ತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ಭೂಮಿ ದಾಖಲೆಗಳ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುತ್ತದೆ.
ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ಹೀಗಿದೆ :-
- ಡಿಜಿಟಲೀಕರಿಸಲಾದ ದಾಖಲೆಗಳಿಗೆ ಆನ್ಲೈನ್ ಪ್ರವೇಶವನ್ನು ಒದಗಿಸುವುದು.
- ಭೂಮಿ ದಾಖಲೆಗಳ ಮೇಲಿನ ದೋಷಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ತಂತ್ರಜ್ಞಾನವನ್ನು ಬಳಸಲಾಗಿದೆ.
- ಭೂಮಿ ಸೇವೆಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಜನಸ್ನೇಹಿಯನ್ನಾಗಿ ಮಾಡುವುದು.
ಈ ಯೋಜನೆಯು ರಾಜ್ಯದ ಭೂಮಿ ದಾಖಲೆಗಳನ್ನು ಸುಧಾರಿಸಲು ಮತ್ತು ರೈತರು ಮತ್ತು ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ದಲ್ಲಿ ಉದ್ಯೋಗ ಅವಕಾಶ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.