ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ಶುರುವಾಗಿದ್ದು, ಕೊಟ್ಟ ಆಶ್ವಾಸನೆಗಳನ್ನ ಒಂದೊಂದೇ ಕಾರ್ಯರೂಪಕ್ಕೆ ತರುತ್ತಿರುವ ಮೋದಿಯವರು ರೈತರಿಗೆ ಮೊದಲ ದಿನವೇ ಗುಡ್ ನ್ಯೂಸ್ ಕೊಟ್ಟಿದ್ರು. ಇದೀಗ ದೇಶದ ಎಲ್ಲ ಮಧ್ಯಮ ಹಾಗೂ ಬಡ ಜನರನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಹೌದು ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಇದೆ ಫೆಬ್ರವರಿ 13ರಿಂದ ಕಾರ್ಯರೂಪಕ್ಕೆ ಬಂದಿದೆ. ಈ ಯೋಜನೆಗಾಗಿ ಕೇಂದ್ರ ಸರಕಾರ 75 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವ್ಯಯಿಸಲಿದೆ.
2024-25ನೇ ಸಾಲಿನಲ್ಲಿ ಯೋಜನೆಗಾಗಿ 10,000 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಹೌದು ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಜತೆಜತೆಯಲ್ಲಿ ಜನರ ಮೇಲಿನ ವಿದ್ಯುತ್ ಬಿಲ್‌ನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇನ್ನು ದೇಶದ 1 ಕೋಟಿ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ಇದಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಗೊಳಿಸುವ ಜತೆಗೆ ಇಂಧನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವಲ್ಲಿ ಈ ಯೋಜನೆ ನೆರವಾಗಲಿದೆ. ಅಲ್ದೇ ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಲು ಕೇಂದ್ರ ಸರಕಾರ ಸಬ್ಸಿಡಿಯನ್ನು ಒದಗಿಸಲಿದೆಯಲ್ಲದೆ ಅಗತ್ಯಬಿದ್ದಲ್ಲಿ ಸಾಲವನ್ನು ಒದಗಿಸಲಿದೆ. ಸೌರ ಫಲಕಗಳ ಅಳವಡಿಕೆಯ ಬಳಿಕ ಯೋಜನೆಯ ಫಲಾನುಭವಿಗಳು ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಲಿದ್ದಾರೆ.
ಇದರಿಂದ ಪ್ರತೀ ಕುಟುಂಬಕ್ಕೆ ವಿದ್ಯುತ್ ಬಿಲ್‌ನಲ್ಲಿ ವಾರ್ಷಿಕ 18,000 ರೂಪಾಯಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಯೋಜನೆಯ ಲಾಭ ಪಡೆಯೋದು ಹೇಗೆ? ಅರ್ಜಿ ಸಲ್ಲಿಸೋದು ಎಲ್ಲಿ? ಯಾರಿಗೆಲ್ಲ ಯೋಜನೆಯ ಲೇಬಜಾ ಸಿಗಲಿದೆ? ಬೇಕಾದ ಅರ್ಹತೆಗಳೇನು ಎಲ್ಲವನ್ನ ನೋಡೋಣ ಬನ್ನಿ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಇನ್ನು ಮುಖ್ಯವಾಗಿ ಈ ಯೋಜನೆಯು ಸೋಲಾರ್ ರೂಫ್ ಟಾಪ್ ಯೋಜನೆಯಡಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್ ಉತ್ಪಾದಿಸಲು ಆಸಕ್ತರಾಗಿರುವವರು ತಮಗೆ ಅಗತ್ಯವಿರುವ ಸೌರ ಫಲಕಗಳು, ವಿದ್ಯುತ್ ಉತ್ಪಾದನ ಪ್ರಮಾಣ, ವ್ಯಾಪ್ತಿ, ಹೂಡಿಕೆ ಪ್ರಮಾಣ ಮತ್ತಿತರ ಮಾಹಿತಿಗಳನ್ನು ಸೋಲಾರ್ ರೂಫ್ ಟಾಪ್ ಕ್ಯಾಲ್ಕುಲೇಟರ್ ಮೂಲಕ ಪಡೆಯಬಹುದಾಗಿದೆ. ಇನ್ನು ಸೋಲಾರ್ ರೂಫ್ಟಾಪ್ ಕ್ಯಾಲ್ಕುಲೇಟರ್‌ನಿಂದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಹೌದು solarrooftop.gov.in. ಈ ವೆಬ್‌ಸೈಟ್‌ನಲ್ಲಿ ಸೋಲಾರ್ ರೂಫ್ ಟಾಪ್ ಕ್ಯಾಲ್ಕುಲೇಟರ್ ಆಪ್ಶನ್‌ಗೆ ಕ್ಲಿಕ್ ಮಾಡಿ ಈ ಮಾಹಿತಿಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.
ಇನ್ನು ಬಹುಮುಖ್ಯವಾಗಿ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ ಅನ್ನೋದನ್ನ ನೋಡೋದಾದ್ರೆ ಮೊದಲಿಗೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಅಧಿಕೃತ ವೆಬ್‌ಸೈಟ್https://pmsuryaghar.gov.in ಗೆ ಹೋಗಿ, ಹೋಮ್‌ಪೇಜ್‌ನಲ್ಲಿ ಕ್ಲಿಕ್ ಲಿಂಕ್ ಸೆಕ್ಷನ್‌ಗೆ ಹೋಗಿ ಅಪ್ಲೈ ಫಾರ್ ರೂಫ್ ಟಾಪ್ ನ್ನ ಕ್ಲಿಕ್ ಮಾಡಬೇಕು. ಆಗ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ಅರ್ಜಿದಾರರು ತಮ್ಮ ಮಾಹಿತಿಯನ್ನು ತುಂಬಬೇಕು. ಅರ್ಜಿದಾರರ ಜಿಲ್ಲೆ, ರಾಜ್ಯ, ವಿದ್ಯುತ್ ಸರಬರಾಜು ಕಂಪೆನಿಯ ಹೆಸರು, ವಿದ್ಯುತ್ ಗ್ರಾಹಕರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇದಾದ ಬಳಿಕ ನೆಕ್ಸ್ಟ್ ಆಯ್ಕೆಯನ್ನು ಒತ್ತಿದರೆ ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ.
ಅದರಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ತುಂಬಬೇಕು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಅನುಮೋದನೆ ಬರುವವರೆಗೆ ಕಾಯಬೇಕು. ಅನುಮೋದನೆ ದೊರೆತ ಬಳಿಕ ಡಿಸ್ಕಾಂನಲ್ಲಿ ನೋಂದಣಿಯಾದ ಯಾವುದೇ ಗ್ರಾಹಕರಿಂದ ಪ್ಲಾಂಟ್ ಪಡೆದು ಅಳವಡಿಸಬಹುದು. ನಂತರ ಪ್ಲಾಂಟ್ ಸ್ಥಾಪಿಸಿದ ಬಳಿಕ ಅದರ ಮಾಹಿತಿಯನ್ನು ಸಬ್‌ಮಿಟ್ ಮಾಡಬೇಕು ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು.ಅಲ್ದೇ ಡಿಸ್ಕಾಂನವರು ತಪಾಸಣೆ ನಡೆಸಿದ ಬಳಿಕ ಪೋರ್ಟಲ್‌ನಿಂದ ಕಮಿಷನಿಂಗ್ ಪ್ರಮಾಣಪತ್ರವನ್ನು ನೀಡುತ್ತಾರೆ. ಪ್ರಮಾಣಪತ್ರ ದೊರೆತ ಬಳಿಕ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ರದ್ದಾದ ಚೆಕ್ ಅನ್ನು ಪೋರ್ಟಲ್ ಮೂಲಕ ಸಬ್‌ಮಿಟ್ ಮಾಡಬೇಕು. ಕೊನೆಯದಾಗಿ 30 ದಿನಗಳೊಳಗೆ ಅರ್ಜಿದಾರರ ಖಾತೆಗೆ ಸಬ್ಸಿಡಿ ವರ್ಗಾವಣೆಗೊಳ್ಳುತ್ತದೆ.
ಇದನ್ನೂ ಓದಿ: ಬಜಾಜ್ CNG ಬೈಕ್ ಜುಲೈ 17ಕ್ಕೆ ಬಿಡುಗಡೆ; ಎಲ್ಲಾ ಬೈಕ್ ಗಳಿಗೆ ನಡುಕ ಹುಟ್ಟಿಸಿದ ಬಜಾಜ್
ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?
ಇನ್ನು ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು., ಅವ್ರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗಿರಬೇಕು, ಮನೆಯಲ್ಲಿ ಸರಕಾರಿ ಉದ್ಯೋಗದಲ್ಲಿರುವ ಸದಸ್ಯರಿಲ್ಲದಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಮುಖ್ಯವಾಗಿ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು. ಅಲ್ದೇ ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು, 18 ವರ್ಷ ಮೇಲ್ಪಟ್ಟವರು ಯೋಜನೆಯ ಲಾಭ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಅಗತ್ಯ ದಾಖಲೆಪತ್ರ ಹೊಂದಿರಬೇಕು.
ಇನ್ನು ಆ ದಾಖಲೆಗಳು ಯಾವವು ಅಂತ ನೋಡೋದಾದ್ರೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಅರ್ಜಿದಾರರ ಪಾನ್‌ಕಾರ್ಡ್ ಜೊತೆಗೆ ಕಳೆದ ಆರು ತಿಂಗಳುಗಳ ಅವಧಿಯ ವಿದ್ಯುತ್ ಬಿಲ್ ಸೇರಿದಂತೆ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ ಬ್ಯಾಂಕ್ ಖಾತೆ ಪ್ರತಿ, ಆದಾಯ ಪ್ರಮಾಣ ಪತ್ರದ ಜೊತೆಗೆ ಮನೆಯ ದಾಖಲೆಪತ್ರಗಳು ಸೇರಿದಂತೆ ವಿಳಾಸ ದೃಢೀಕರಣ ಪ್ರಮಾಣಪತ್ರ ಮತ್ತು ಇ-ಮೇಲ್ ವಿಳಾಸವನ್ನ ಒದಗಿಸಬೇಕು. ಇದಾದ ಬಳಿಕ ಯೋಜನೆಯ ಪ್ರಯೋಜನಗಳನ್ನ ಅರ್ಹ ಫಲಾನುಭವಿಗಳಿಗೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕಗಳ ಅಳವಡಿಕೆಗೆ ಸಬ್ಸಿಡಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲದ ನೆರವು ಲಭಿಸಲಿದೆ. ಅಲ್ದೇ 5 ವರ್ಷಗಳ ನಿರ್ವಹಣ ಗ್ಯಾರಂಟಿ ಇದೆ. ವಿದ್ಯುತ್ ಬಿಲ್ ಕಡಿತವಾಗಲಿದ್ದು,ಫಲಾನುಭವಿಗಳು ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸಿದಲ್ಲಿ ಅದನ್ನು ಮಾರಾಟ ಮಾಡಿ ಆದಾಯವನ್ನ ಕೂಡ ಗಳಿಸಬಹುದಾಗಿದೆ.
ಇದನ್ನೂ ಓದಿ: ನಿಮ್ಮ FD ಗೆ ಭರ್ಜರಿ ಬಡ್ಡಿ! ಅದ್ಭುತ ಬಡ್ಡಿ ದರಗಳನ್ನು ನೀಡುವ ಕೆಲವು ಬ್ಯಾಂಕುಗಳು ಇಲ್ಲಿವೆ!
ಇದನ್ನೂ ಓದಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 9000+ ಹುದ್ದೆಗಳಿಗೆ ನೇಮಕಾತಿ: IBPS RRB 2024 ಅರ್ಜಿ ಪ್ರಕಟಣೆ!