70 ಕಿ.ಮೀ ಮೈಲೇಜ್ ನೀಡುವ ಭಾರತದ ಅಗ್ಗದ ಬೈಕ್ ಗಳ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಬೈಕ್ ಕ್ರೆಜ್ ಜಾಸ್ತಿ. ಹೆಚ್ಚು ಮೈಲೇಜ್ ನೀಡುವ ಬೈಕ್ ಹಾಗೆ ಆಕರ್ಷಣೆ ಇರುವ ಬೈಕ್ ಹೀಗೆ ಅನೇಕ ರೀತಿಯ ಬೈಕ್ ಗಳು ಭಾರತದಲ್ಲಿ ಇವೆ. ಕಡಿಮೆ ಮೊತ್ತದ ಬೈಕ್ ಸಹ ಹೆಚ್ಚು ಮೈಲೇಜ್ ನೀಡುತ್ತದೆ. ಹಾಗೆಯೇ ಲಕ್ಷಾಂತರ ರೂಪಾಯಿಯ ಬೈಕ್ ಸಹ ಕಡಿಮೆ ಮೈಲೇಜ್ ನೀಡಬಹುದು. ಈಗ ನಾವು ಕಡಿಮೆ ಮೊತ್ತದ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ತಿಳಿಯೋಣ.

WhatsApp Group Join Now
Telegram Group Join Now

ಹೆಚ್ಚು ಮೈಲೇಜ್ ನೀಡುವ ಅಗ್ಗದ ಬೈಕ್ ಗಳು ಯಾವುವು?

1) ಹೀರೋ HF ಡಿಲಕ್ಸ್ :- ಇದು ಭಾರತದಲ್ಲಿ ಅತಿ ಅಗ್ಗದಲ್ಲಿ ಸಿಗುವ ಬೈಕ್ ಗಳಲ್ಲಿ ಒಂದಾಗಿದೆ. ಈ ಬೈಕ್ ಪ್ರತಿ ಲೀಟರ್‌ಗೆ 70 ಕಿಲೋಮೀಟರ್ ಮೈಲೇಜ್ ತನಕ ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಬೈಕ್ ನಾ ಎಂಜಿನ್ ಬಗ್ಗೆ ಹೇಳುವುದಾದರೆ 97.2 ಸಿಸಿ ಎಂಜಿನ್ ಹೊಂದಿದೆ. ಹಾಗೂ ಇದು ಗರಿಷ್ಠ 8.02 ಬಿಎಚ್‌ಪಿ ಮತ್ತು 8.05 ಎನ್‌ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. Hero HF Deluxe ನ ಬೆಲೆ 59,998 ರೂಪಾಯಿ ಆಗಿದೆ.

2) ಹೀರೋ HF 100 :- ಹೀರೋ HF 100 ಭಾರತದ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ವಾಹನ ಸೈಕಲ್‌ಗಳಲ್ಲಿ. ಇದು ಉತ್ತಮ ಇಂಧನ ದಕ್ಷತೆ ಮತ್ತು ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ. ಈ ಬೈಕ್ ನಾ ಎಂಜಿನ್ 97.2 cc ಆಗಿದೆ. ಇದು 8.02 bhp ಪವರ್ ಹೊಂದಿದೆ ಹಾಗೂ 8.05 Nm ಟಾರ್ಕ್ ಇದೆ. Hero HF 100 ಬೆಲೆಯು 59,018 ರೂಪಾಯಿ ಆಗಿದೆ. ಇದು ಒಂದು ಲೀಟರ್ ಪೆಟ್ರೋಲ್ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

3) ಬಜಾಜ್ CT 100 :- ಇದು ಸಹ ಕಡಿಮೆ ಮೊತ್ತದ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಒಂದಾಗಿದೆ. ಇದು 7.79 bhp ಹಾಗೂ 8.34 Nm ಗರಿಷ್ಠ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇದರ ಎಂಜಿನ್ ಸಾಮರ್ಥ್ಯವು 99.27 ಆಗಿದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ 75 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಬೆಲೆ 62,265 ರೂಪಾಯಿ ಆಗಿದೆ.

4) ಟಿವಿಎಸ್ ಸ್ಪೋರ್ಟ್:- ಇದು ಉತ್ತಮ ಬೈಕ್ ಆಗಿದ್ದು, ಇದು 70 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಬೈಕ್ ನಾ ಎಂಜಿನ್ ಬಗ್ಗೆ ಹೇಳುವುದಾದರೆ ಇದು 109.7 ಸಿಸಿ ಎಂಜಿನ್ ಹೊಂದಿದೆ. ಈ ಬೈಕ್ ಗರಿಷ್ಠ 8.19 ಪಿಎಸ್ ಪವರ್ ಹಾಗೂ 8.7 ಎನ್ ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬೈಕ್ ಬೆಲೆ 59,881 ರೂಪಾಯಿ ಆಗಿದೆ.

5) ಬಜಾಜ್ ಪ್ಲಾಟಿನಾ 100 :- ಇದು ಉತ್ತಮವಾದ ಆಗದ ಬೈಕ್ ಆಗಿದ್ದು ಈ ಬೈಕ್ ಎಂಜಿನ್ ಬಗ್ಗೆ ಹೇಳುವುದಾದರೆ 102 ಸಿಸಿ ಎಂಜಿನ್ ಹೊಂದಿರುವ ಬೈಕ್ ಆಗಿದ್ದು ಇದು ಗರಿಷ್ಠ 7.79 ಬಿಎಚ್‌ಪಿ ಮತ್ತು 8.34 ಎನ್‌ಎಂ ಟಾರ್ಕ್ ಅನ್ನು ಉತ್ಪಾದಾನೆ ಮಾಡುತ್ತದೆ. ಈ ಬೈಕ್ 72 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಬೆಲೆ 68,262 ರೂಪಾಯಿ ಆಗಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ: ತೋಟಗಾರಿಕಾ ಇಲಾಖೆಯಿಂದ ಮಿನಿ ಟ್ರ್ಯಾಕ್ಟ‌ರ್ ಖರೀದಿಗೆ 25% ರಿಂದ 35% ಸಬ್ಸಿಡಿ ನೀಡಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಇವು!

Sharing Is Caring:

Leave a Comment