ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೇ. ಹೊಸದಾಗಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ತಂದಿದೆ. ಹೊಸ ಯೋಜನೆಯು ಸರ್ಕಾರಿ ನೌಕರರ ನಿವೃತ್ತಿಯ ನಂತರ ಸುರಕ್ಷಿತ ಆರ್ಥಿಕ ಭವಿಷ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎನ್ನಬಹುದು. ಈ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಪಡೆಯೋಣ.
ಕೇವಲ 10 ವರ್ಷಗಳ ಸೇವೆ ಸಲ್ಲಿಸಿದವರಿಗೆ ಈ ಯೋಜನೆಯ ಪ್ರಯೋಜನ ಪಡೆಯುವ ಅವಕಾಶ :- ಈ ಪಿಂಚಣಿ ಯೋಜನೆಯಲ್ಲಿ, 10 ವರ್ಷಗಳ ಕನಿಷ್ಠ ಸೇವಾ ಅವಧಿಯನ್ನು ಪೂರೈಸಿದ ಎಲ್ಲಾ ನೌಕರರು ನಿವೃತ್ತಿಯ ನಂತರ ಖಚಿತವಾದ ಪಿಂಚಣಿಯನ್ನು ಪಡೆಯುತ್ತಾರೆ. ಇದು ಹಿಂದಿನ ಯೋಜನೆಗಿಂತ ಹೆಚ್ಚಿನ ನೌಕರರಿಗೆ ಲಾಭವನ್ನು ನೀಡುತ್ತದೆ. ಈ ಹಿಂದೆ ಈ ಯೋಜನೆಯ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಮಾತ್ರ ಲಭ್ಯ ಇತ್ತು. ಆದರೆ ಈಗ ಈ ಯೋಜನೆಯಲ್ಲಿ ಬದಲಾವಣೆ ತರಲಾಗಿದೆ.
ಸರಾಸರಿ ಪಿಂಚಣಿ ಏಷ್ಟು ಸಿಗುತ್ತಿತ್ತು :- ಈ ಹಿಂದಿನ ಪಿಂಚಣಿ ವ್ಯವಸ್ಥೆಯಲ್ಲಿ, ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ನಿವೃತ್ತಿಯ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದಲ್ಲಿ ಶೇಕಡಾ 50ರಷ್ಟು ಪಿಂಚಣಿ ಲಭ್ಯವಿತ್ತು ಅಂದರೆ ಅರ್ಧದಷ್ಟು ಪಿಂಚಣಿ ಸಿಗುತ್ತಿತ್ತು.
ಸರ್ಕಾರಿ ನೌಕರ ತೀರಿಕೊಂಡರೆ ಕುಟುಂಬದ ಸದಸ್ಯರಿಗೆ ಆಗಲಿದೆ ಹಣ :-
ಕೇಂದ್ರ ಸರ್ಕಾರಿ ನೌಕರರ ಮರಣದ ಸಂದರ್ಭದಲ್ಲಿ, ನೌಕರರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕುಟುಂಬ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಪ್ರಕಾರ, ಮೃತ ನೌಕರನ ಸಂಗಾತಿಗೆ ನಿವೃತ್ತಿಯ ಸಮಯದಲ್ಲಿ ಪಡೆಯುತ್ತಿದ್ದ ಪಿಂಚಣಿಯ ಶೇಕಡಾ 60%ರಷ್ಟು ಮೊತ್ತವನ್ನು ತಿಂಗಳಿಗೆ ನಿಗದಿಪಡಿಸಲಾಗಿದೆ.
ಕನಿಷ್ಠ ಪಿಂಚಣಿ ಮೊತ್ತ ಎಷ್ಟು?: ಯೋಜನೆಯ ನಿಯಮ ಬದಲಾವಣೆಯ ಪ್ರಕಾರ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಎಲ್ಲಾ ನೌಕರರ ನಿವೃತ್ತಿಯ ನಂತರ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿ ಸಿಗಲಿದೆ.
ಎಷ್ಟು ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ?: ಏಕೀಕೃತ ಪಿಂಚಣಿ ಯೋಜನೆಯಿಂದ ಪ್ರಸ್ತುತ 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದರ ಜೊತೆಗೆ ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಅಳವಡಿಸಿಕೊಂಡರೆ, ಒಟ್ಟಾರೆಯಾಗಿ ಸುಮಾರು 90 ಲಕ್ಷ ಪಿಂಚಣಿದಾರರು ಈ ಯೋಜನೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮೊತ್ತ ಪಡೆಯಲಿದ್ದಾರೆ:- ನಿವೃತ್ತಿಯ ಸಮಯದಲ್ಲಿ ಗ್ರಾಚ್ಯುಟಿ ಜೊತೆಗೆ, ನೌಕರರು ತಮ್ಮ ಸೇವಾ ಅವಧಿಯ ಆಧಾರದ ಮೇಲೆ ಒಂದು ದೊಡ್ಡ ಮೊತ್ತದ ಹಣವನ್ನು ಪಡೆಯಲಿದ್ದಾರೆ. ಈ ಮೊತ್ತವು ಪ್ರತಿ ಆರು ತಿಂಗಳ ಸೇವೆಗೆ 1/10 ತಿಂಗಳ ಸಂಬಳಕ್ಕೆ ಸಮಾನವಾಗಿರುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿಯಿರಿ.
ಏಕೀಕೃತ ಪಿಂಚಣಿ ಯೋಜನಯ ಲಾಭಗಳು ಏನೇನು?
- ಖಚಿತವಾದ ಪಿಂಚಣಿ ಲಭ್ಯ: ಈ ಯೋಜನೆಯಲ್ಲಿ ನಿವೃತ್ತಿಯ ನಂತರ ನೌಕರರಿಗೆ ಖಚಿತವಾದ ಪಿಂಚಣಿ ಲಭ್ಯವಾಗುತ್ತದೆ.
- ಹೆಚ್ಚಿನ ಪಿಂಚಣಿ ಮೊತ್ತ ಸಿಗಲಿದೆ: ಕನಿಷ್ಠ ಪಿಂಚಣಿ ಮೊತ್ತ ಹಾಗೂ ಹಿಂದೆ ಸಿಗುವ ಪಿಂಚಣಿ ಮೊತ್ತಕ್ಕಿಂತ ಹೆಚ್ಚಿನ ಮೊತ್ತವು ಸಿಗಲಿದೆ.
- ಕುಟುಂಬ ಪಿಂಚಣಿ: ನೌಕರನ ಮರಣದ ನಂತರ ನೌಕರರ ಕುಟುಂಬಕ್ಕೆ ಕುಟುಂಬ ಪಿಂಚಣಿಯು ಈ ಯೋಜನೆಯಲ್ಲಿ ಸಿಗಲಿದೆ.
- ಸುಸ್ಥಿರ ಆರ್ಥಿಕ ಭದ್ರತೆ: ಈ ಯೋಜನೆಯಿಂದ ನಿವೃತ್ತಿಯ ನಂತರ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯು ಸಿಗಲಿದೆ.
ಇದನ್ನೂ ಓದಿ: ಹೊಸ ವೈಶಿಷ್ಟ್ಯದ ಮೂಲಕ ನೀವು ಖಾತೆಯಲ್ಲಿ ಹಣವಿಲ್ಲದಿದ್ದರೂ ಸುಲಭವಾಗಿ ಫೋನ್ ಪೇ ಪಾವತಿ ಮಾಡಬಹುದು.