ಏರ್‌ಟೆಲ್ ಮತ್ತು ಜಿಯೋ ಎರಡೂ ಕಂಪನಿಗಳು ವಿವಿಧ ಬೆಲೆ ಶ್ರೇಣಿಯಲ್ಲಿ 5G ಯೋಜನೆಗಳನ್ನು ನೀಡುತ್ತವೆ. ಈ ಯೋಜನೆಗಳು ಅನಿಯಮಿತ ಡೇಟಾ, ಹೆಚ್ಚಿನ ವೇಗದ ಇಂಟರ್ನೆಟ್, ವೀಡಿಯೊ ಸ್ಟ್ರೀಮಿಂಗ್, ಮತ್ತು ಇತರ ಅನೇಕ ಪ್ರಯೋಜನಗಳನ್ನು ಹೊಂದಿದೆ. 4G ಗಿಂತ ಹಲವಾರು ಪಟ್ಟು ವೇಗ ಹೊಂದಿರುವ 5G ಯೋಜನೆಗಳ ರೀಚಾರ್ಜ್ ಪ್ಲಾನ್ ಹಾಗೂ ಇನ್ನಿತರ ಮಾಹಿತಿಗಳನ್ನು ನೀವು ಈ ಲೇಖನದಲ್ಲಿ ತಿಳಿಯಬಹುದು.
ಹೆಚ್ಚುವರಿ ಹಣ ನೀಡಬೇಕು :- ಏರ್‌ಟೆಲ್ ಮತ್ತು ಜಿಯೋ ಈಗ 5G ಸೇವೆಯನ್ನು ಸ್ವಲ್ಪ ಬದಲಾಯಿಸಲಾಗಿದೆ. ದಿನಕ್ಕೆ ಕನಿಷ್ಠ 2GB 4G ಡೇಟಾ ಸಿಗುವ ರೀಚಾರ್ಜ್ ಮಾಡಿದರೆ ಮಾತ್ರ ಈಗ 5G ಸೇವೆ ಸಿಗುತ್ತೆ. ಇದಕ್ಕಿಂತ ಕಡಿಮೆ ಡೇಟಾ ಇರುವ ಯೋಜನೆಯಲ್ಲಿ 5G ಬಳಸಬೇಕು ಅಂದ್ರೆ ಹೆಚ್ಚುವರಿ ಹಣ ಕೊಟ್ಟು ಖರೀದಿಸಬೇಕು.
28 ದಿನಗಳ ಯೋಜನೆ :- ತುಂಬಾ ಜನಪ್ರಿಯ ಪ್ಲಾನ್‌ಗಳೆಂದರೆ ಜಿಯೋದ 349 ರೂಪಾಯಿ ಮತ್ತು ಏರ್‌ಟೆಲ್‌ನ 379 ರೂಪಾಯಿ ಪ್ಲಾನ್‌ಗಳು. ಈ ಯೋಜನೆಯಲ್ಲಿ ತಿಂಗಳಿಗೆ 5G ಡೇಟಾ ಉಚಿತವಾಗಿ ಸಿಗುತ್ತೆ. ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತವೆ ಮತ್ತು 5G ಗಳು ಅನಿಯಮಿತವಾಗಿ ಬಳಸಲು ನೀಡುತ್ತವೆ. 5G ಕಡಿಮೆ ಬೆಲೆಯಲ್ಲಿ ಬಳಸಲು ಬಯಸುವವರಿಗೆ ಇವು ಅತ್ಯುತ್ತಮ ಆಯ್ಕೆಯಾಗಿದೇ.
2 ತಿಂಗಳ 5G ಡೇಟಾ ಯೋಜನೆ :-
2 ತಿಂಗಳವರೆಗೆ ಅನಿಯಮಿತ 5G ಬಳಸಲು ಬಯಸುವವರಿಗೆ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು 600 ರೂಪಾಯಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಒಳ್ಳೆ ಆಫರ್‌ಗಳನ್ನು ನೀಡುತ್ತಿವೆ. ಏರ್‌ಟೆಲ್‌ನ 649 ರೂಪಾಯಿ ಮತ್ತು ಜಿಯೋದ 629 ರೂಪಾಯಿ ಪ್ಲಾನ್‌ಗಳಲ್ಲಿ 56 ದಿನಗಳ 5G ಡೇಟಾ ಉಚಿತವಾಗಿ ಸಿಗುತ್ತೆ. ಜಿಯೋದಲ್ಲಿ 719 ರೂಪಾಯಿಯ ಪ್ಲಾನ್‌ನಲ್ಲಿ 70 ದಿನಗಳ 5G ಡೇಟಾ ಜೊತೆಗೆ, ದಿನಕ್ಕೆ 2GB 4G ಡೇಟಾ ಕೂಡ ಸಿಗುತ್ತೆ.
3 ತಿಂಗಳಿಗೆ ಜಿಯೋ ಮತ್ತು ಏರ್ಟೆಲ್ ನೀಡುವ ಉತ್ತಮ ಪ್ಲಾನ್ :- 3 ತಿಂಗಳವರೆಗೆ ಅನಿಯಮಿತ 5G ಬಳಸಲು ಬಯಸುವವರಿಗೆ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು 1000 ರೂಪಾಯಿಗೆ ಒಳ್ಳೆ ಆಫರ್‌ಗಳನ್ನು ನೀಡುತ್ತಿವೆ. ಜಿಯೋದ 999 ರೂಪಾಯಿ ಪ್ಲಾನ್‌ನಲ್ಲಿ 98 ದಿನಗಳ ವ್ಯಾಲಿಡಿಟಿ ಒಂದಿಗೆ 5G ಡೇಟಾ ಉಚಿತವಾಗಿ ಸಿಗುತ್ತೆ ಮತ್ತು ದಿನಕ್ಕೆ 2GB ಯು 4G ಡೇಟಾ ಕೂಡ ಸಿಗುತ್ತೆ. ಏರ್‌ಟೆಲ್‌ನ 979 ರೂಪಾಯಿ ಪ್ಲಾನ್‌ನಲ್ಲಿ 84 ಮಾನ್ಯತೆ ಇರುವ 5G ಡೇಟಾ ಉಚಿತವಾಗಿ ಸಿಗುತ್ತೆ ಮತ್ತು ದಿನಕ್ಕೆ 2GB ಯ 4G ಡೇಟಾ ಕೂಡ ಸಿಗುತ್ತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಒಂದು ವರ್ಷಗಳ ಡೇಟಾ ಪ್ಲಾನ್ ಬಗ್ಗೆ ಮಾಹಿತಿ :-
ಒಂದು ವರ್ಷದವರೆಗೆ ಅನಿಯಮಿತವಾಗಿ 5G ಬಳಸಲು ಬಯಸುವವರಿಗೆ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು 3500 ರೂಪಾಯಿಗಳ ಬೆಲೆಗೆ ಒಳ್ಳೆ ಆಫರ್‌ಗಳನ್ನು ನೀಡುತ್ತಿವೆ. ಏರ್‌ಟೆಲ್‌ನ 3599 ರೂಪಾಯಿ ಪ್ಲಾನ್‌ನಲ್ಲಿ ಒಂದು ವರ್ಷದವರೆಗೆ 5G ಡೇಟಾ ಉಚಿತವಾಗಿ ಸಿಗುತ್ತೆ ಮತ್ತು ದಿನಕ್ಕೆ 2GB ಯ 4G ಡೇಟಾ ಕೂಡ ಸಿಗುತ್ತೆ. ಜಿಯೋದ 3599 ರೂಪಾಯಿ ಪ್ಲಾನ್‌ನಲ್ಲಿ ಒಂದು ವರ್ಷದವರೆಗೆ 5G ಡೇಟಾ ಉಚಿತವಾಗಿ ಸಿಗುತ್ತೆ ಮತ್ತು ದಿನಕ್ಕೆ 2. 5GB 4G ಡೇಟಾ ಕೂಡ ಸಿಗುತ್ತೆ. ಆದರೆ, 1999 ರೂಪಾಯಿ ಮತ್ತು 1899 ರೂಪಾಯಿಯಲ್ಲಿ ಸಿಗುವ ಪ್ಲಾನ್‌ಗಳಲ್ಲಿ 5G ಸೌಲಭ್ಯ ಸಿಗುವುದಿಲ್ಲ.
ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ; ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ರಿಚಾರ್ಜ್ ಬೆಲೆಗಳು!
ಇದನ್ನೂ ಓದಿ: ನೀವು BSNL ಗೆ ನಿಮ್ಮ ಸಿಮ್ ಪೋರ್ಟ್ ಮಾಡಿಸಬೇಕಾ? ಹಾಗಾದರೆ ನೀವು ಮನೆಯಲ್ಲಿಯೇ ಕುಳಿತು ಸರಳ ವಿಧಾನ ಅನುಸರಿಸಿ