ಯಾವುದೇ ಅಂಗಡಿಗೆ ಹೋಗಿ ಯಾವುದೇ ವಸ್ತುವನ್ನು ತೆಗೆದುಕೊಂಡರು ಅಥವಾ ಸ್ನೇಹಿತರಿಗೆ ಅಥವಾ ನೆರೆಹೊರೆಯವರಿಗೆ ಹಣ ನೀಡಬೇಕು ಎಂದರು ಹಿಂದಿನಂತೆ ಕ್ಯಾಶ್ ನೀಡುವ ಪ್ರಮೇಯ ಈಗ ಇಲ್ಲ. ಮೊಬೈಲ್ ನಲ್ಲಿ ಪೇಮೆಟ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಬೇಕಾದವರಿಗೆ ಬೇಕಾದಾಗ ನಮ್ಮ ಬ್ಯಾಂಕ್ ಅಕೌಂಟ್ ನಿಂದಾ ನೇರವಾಗಿ ಹಣವನ್ನು ಪಾವತಿ ಮಾಡಬಹುದು. ಈಗ ಚಿಕ್ಕ ಚಿಕ್ಕ ಹಳ್ಳಿಯಲ್ಲಿಯೂ ಸಹ QR code scanner ಇರುತ್ತದೆ. ಹಾಗಿದ್ದಾಗ ನಾವು ಯಾವಾಗಲಾದರೂ ತಪ್ಪಾಗಿ ಅಕೌಂಟ್ ನಂಬರ್ ಅಥವಾ ಮೊಬೈಲ್ ಸಂಖ್ಯೆ ಹಾಕಿ ಪೇಮೆಂಟ್ ಮಾಡಿದ ಬಳಿಕ ನಮಗೆ ಅಯ್ಯೋ ನಾವು ಹಣವನ್ನು ಕಳೆದುಕೊಂಡೆವು ಅನ್ನಿಸಿದರೆ ನೀವು ತಪ್ಪಾಗಿ ಪೇಮೆಂಟ್ ಮಾಡಿರುವ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗುತ್ತದೆ. ನೀವು ಕೆಲವು ಸುಲಭ ವಿಧಾನಗಳನ್ನು ಅನುಸರಿಸಿ ನಿಮ್ಮ ಹಣವನ್ನು ವಾಪಸ್ ಪಡೆಯಲು ಸಾಧ್ಯವಿದೆ. ಹಾಗಾದರೆ ಯಾವ ಯಾವ ವಿಧಾನಗಳನ್ನು ಬಳಸಿ ಮಿಸ್ ಆಗಿ ಮಾಡಿದ payment ಹಣವನ್ನು ಪಡೆಯಬಹುದು ಎಂದುದನ್ನು ನೋಡೋಣ.
ಮಿಸ್ ಆಗಿ payment ಮಾಡಿದರೆ ನೀವು ಈ ಮಾರ್ಗಗಳನ್ನು ಅನುಸರಿಸಿ ಹಣವನ್ನು ವಾಪಸ್ ಪಡೆಯಬಹುದು :
ಬ್ಯಾಂಕ್ ಗೆ ನೇರವಾಗಿ ಸಂಪರ್ಕಿಸಿ:- ನೀವು ತಪ್ಪಾಗಿ ಹಣವನ್ನು ಪೇಮೆಂಟ್ ಮಾಡಿದಾಗ ನೀವು ನೇರವಾಗಿ ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ನೀಡಬೇಕು. ಅಲ್ಲಿ ಡಿಜಿಟಲ್ ಪೇಮೆಂಟ್ ವಿಭಾಗವು ಇರುತ್ತದೆ. ಅಲ್ಲಿ ನೀವು ನಿಮ್ಮ ದೂರನ್ನು ನೀಡುವ ಅವಕಾಶವೂ ಇರುತ್ತದೆ. ನಿಮ್ಮ ಹಣವನ್ನು ತಪ್ಪಾಗಿ ಪೇಮೆಂಟ್ ಮಾಡಿರುವ ಬಗ್ಗೆ ವಿವರಗಳನ್ನು ಬ್ಯಾಂಕ್ ಸಿಬ್ಬಂದಿಗೆ ನೀಡಬೇಕು. ನಿಮ್ಮ ಬ್ಯಾಂಕ್ ಪಾಸ್ ಬುಕ್ ಹಾಗೂ ನೀವು ಆನ್ಲೈನ್ ಪೇಮೆಂಟ್ ಮಾಡಿರುವ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಬಳಿಕ ಬ್ಯಾಂಕ್ ನವರು ನೀವು ನೀಡುವ ಮಾಹಿತಿಗಳನ್ನು ಸರಿಯಾಗಿ ಪರಿಶೀಲನೆ ಮಾಡುತ್ತಾರೆ. ಹಣ ಕಳುಹಿಸಿದ UTR ವಿವರಗಳನ್ನು ಪಡೆದು ಬಳಿಕ ಬ್ಯಾಂಕ್ ನವರು ನೀವು ಯಾರಿಗೆ ಹಣವನ್ನು ಮಿಸ್ ಆಗಿ ನೀಡಿದ್ದೀರಿ ಅವರನ್ನು ಸಂಪರ್ಕ ಮಾಡುತ್ತದೆ.
ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ನೀವು ಮಿಸ್ ಆಗಿ ಹಣ ಕಳುಹಿಸಿರುವವರ ಬ್ಯಾಂಕ್ ಅಕೌಂಟ್ ಒಂದೇ ಬ್ಯಾಂಕ್ ಆಗಿದ್ದರೆ ಅವರನ್ನು ಬ್ಯಾಂಕ್ ನೇರವಾಗಿ ಸಂಪರ್ಕಿಸಿ ನಿಮಗೆ ಹಣ ಬರುವ ಹಾಗೆ ಮಾಡುತ್ತದೆ. ಬೇರೆ ಬ್ಯಾಂಕ್ ಖಾತೆ ಹೊಂದಿದರೆ ಅವರ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಯಾವ ಬ್ಯಾಂಕ್ ನಲ್ಲಿದೆ ಎಂಬ ಬಗ್ಗೆ ಮಾಹಿತಿಯನ್ನು ನಿಮಗೆ ನೀಡುತ್ತದೆ. ನೀವು ಖಾತೆದಾರರ ಬ್ಯಾಂಕ್ ಶಾಖೆಗೆ ಅಥವಾ ನಿಮ್ಮ ಹತ್ತಿರದ ಅದೇ ಬ್ಯಾಂಕ್ ನಾ ಶಾಖೆಗೆ ಹೋಗು ಮಾಹಿತಿ ನೀಡಬೇಕು. ಬಳಿಕ ಹಣವನ್ನು ಕಳುಹಿಸಲು ಆ ವ್ಯಕ್ತಿ ಒಪ್ಪಿದರೆ ನಿಮಗೆ 7 ದಿನಗಳ ಒಳಗಾಗಿ ನಿಮ್ಮ ಖಾತೆಗೆ ಹಣವು ಬರುತ್ತದೆ. ಇಲ್ಲವಾದರೆ ನೀವು ದೂರು ನೀಡಿ ಹಣ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಣ ನೀಡಲು ವ್ಯಕ್ತಿ ನಿರಾಕರಿಸಿದರೆ ದೂರು ನೀಡುವ ವಿಧಾನ :-
ನಿಮ್ಮ ಹಣವನ್ನು ನೀಡಲು ಹಣ ಪಡೆದ ಅನಾಮಿಕ ವ್ಯಕ್ತಿ ನಿರಾಕರಿಸಿದರೆ ನೀವು ದೂರು ನೀಡಬಹುದು. npci.org.in ಗೆ ಭೇಟಿ ನೀಡಿ ನೀವು ತಪ್ಪಾಗಿ ಹಣವನ್ನು ಟ್ರಾನ್ಸ್ಫರ್ ಮಾಡಿರುವ ಬಗ್ಗೆ ಮಾಹಿತಿ ನೀಡಿ ದೂರು ನೀಡಬಹುದಾಗಿದೆ. ದೂರು ನೀಡಿ 30 ದಿನಗಳ ಒಳಗೆ ನಿಮ್ಮ ಸಮಸ್ಯೆ ಬಗೆಹರಿಯದೆ ಇದ್ದರೆ ಬ್ಯಾಂಕಿಂಗ್ ಓಂಬುಡ್ಸ್ ಮನ್ ಗೆ ಸಂಪರ್ಕಿಸಿ ನೀವು ಹಣ ಪಡೆಯಲು ಸಾಧ್ಯ.
ಇದನ್ನೂ ಓದಿ: ಇನ್ಮುಂದೆ ವೇಟಿಂಗ್ ಲಿಸ್ಟ್ ನಲ್ಲಿ ರೈಲ್ವೆ ಟಿಕೆಟ್ ಇದ್ದರೆ ನೀವು ಪ್ರಯಾಣಿಸುವಂತೆ ಇಲ್ಲ
ಇದನ್ನೂ ಓದಿ: ಹಿರಿಯ ನಾಗರಿಕರಿಗೆ FD ಯೋಜನೆಯಲ್ಲಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?