ಯಾವ ಬಣ್ಣದ ನಂದಿನಿ ಪ್ಯಾಕೇಟ್‌ ಹಾಲು ಬಳಕೆಗೆ ಉತ್ತಮ ಎಂಬುದನ್ನು ತಿಳಿಯಿರಿ.

ಕರ್ನಾಟಕದಲ್ಲಿ ನಂದಿನಿ ಪ್ಯಾಕೆಟ್ ಹಾಲನ್ನು ಬಳಸುವವರ ಸಂಖ್ಯೆ ಅಧಿಕವಾಗಿದೆ. ರೈತರಿಂದ ಶುದ್ಧ ಹಾಲನ್ನು ಖರೀದಿಸಿ ಮಾರಾಟ ಮಾಡುವಲ್ಲಿ ಮೊದಲ ಸ್ಥಾನ ನಂದಿನಿ ಪಡೆದಿದೆ. ನಂದಿನಿ ಹಾಲು ಖರೀದಿಸುವಾಗ ನೀಲಿ ಬಣ್ಣ, ಕೇಸರಿ ಬಣ್ಣ, ಹಸಿರು ಬಣ್ಣ, ಹಾಗೂ ಹಳದಿ ಬಣ್ಣಗಳ ಹಾಲಿನ ಪ್ಯಾಕೆಟ್ ಗಳು ಸಿಗುತ್ತವೆ. ಒಂದೊಂದು ಬಣ್ಣದ ಹಾಲಿನ ಪ್ಯಾಕೆಟ್ ಗೆ ಬೇರೆ ಬೇರೆ ದರಗಳು ಇರುತ್ತವೆ. ಇವುಗಳಲ್ಲಿ ಯಾವ ಬಣ್ಣದ ಪ್ಯಾಕೆಟ್ ಹಾಲು ಕೊಂಡಿಕೊಳ್ಳುವುದು ಉತ್ತಮ ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

ಸಹಕಾರ ವಲಯದ ಅತಿ ದೊಡ್ಡ ಬ್ರಾಂಡ್ :- ನಂದಿನಿ ಬ್ರಾಂಡ್ ಸಹಕಾರ ವಲಯದಲ್ಲಿ ಅತೀದೊಡ್ಡ ಹಾಲಿನ ಉತ್ಪನ್ನಗಳು ಮಾರಾಟ ಮಾಡುತ್ತದೆ. ಹಾಲು ಮಾತ್ರ ಅಲ್ಲದೆ ನಂದಿನಿ ಬ್ರಾಂಡ್ ಮೊಸರು ತುಪ್ಪ, ಬೆಣ್ಣೆ, ಮಜ್ಜಿಗೆ, ಸಿಹಿತಿಂಡಿಗಳು ಹೀಗೆ ಇನ್ನಿತರ ಹಾಲಿನ ಉತ್ಪನ್ನಗಳು ಮಾರಾಟ ಮಾಡುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರನ್ನು ಹೊಂದಿರುವುದರ ಜೊತೆಗೆ ಉತ್ತಮ ಬ್ರಾಂಡ್ ಎಂಬ ಹೆಗ್ಗಳಿಕೆಗೆ ನಂದಿನಿ ಬ್ರಾಂಡ್ ಫೇಮಸ್ ಆಗಿದೆ. ಸಹಕಾರ ವಲಯದ ಹಾಲಿನ ಡೈರಿ ಆಗಿದ್ದು ಕರ್ನಾಟಕದಾದ್ಯಂತ ಹಾಲಿನ ಡೈರಿಗಳು ಇವೆ. ಧಾರವಾಡದಲ್ಲಿ ಇದರ ಮುಖ್ಯ ಕಚೇರಿ ಇದೆ.

ಯಾವ ಬಣ್ಣದ ಹಾಲಿನ ಪ್ಯಾಕೆಟ್ ಯಾವುದಕ್ಕೆ ಉತ್ತಮ ಎಂಬುದನ್ನು ತಿಳಿಯೋಣ :- 

ನಂದಿನಿ ಬ್ರಾಂಡ್ ನ ಒಂದೊಂದು ಬಣ್ಣದ ಹಾಲು ಪ್ಯಾಕ್ ಒಂದೊಂದು ವಿಶೇಷತೆ ಹೊಂದಿದೆ. ನಿಮ್ಮ ಅನುಕೂಲಕ್ಕೆ ಹಾಗೂ ಅಗತ್ಯತೆಗೆ ತಕ್ಕಂತೆ ನೀವು ಹಾಲಿನ ಪ್ಯಾಕ್ ಖರೀದಿ ಮಾಡಬಹುದು. ಯಾವ ಬಣ್ಣದ ಹಾಲಿನ ಪ್ಯಾಕ್ ನಲ್ಲಿ ಯಾವ ಯಾವ ವಿಶೇಷತೆಗಳು ಇವೆ ಎಂಬುದನ್ನು ನೋಡೋಣ :-

1) ಕಾಯಿಸದೆ ಕುಡಿಯುವುದಕ್ಕೆ :- ಕೆಲವರಿಗೆ ಕಾಯಿಸಿ ಬಿಸಿ ಹಾಲನ್ನು ಕುಡಿಯುವುದು ಇಷ್ಟ ಆಗಿರುವುದಿಲ್ಲ. ಹಾಗೆಯೇ ವರ್ಕ್ ಅಥವಾ ಸ್ಕೂಲ್ ಗೆ ಹೋಗುವವರಿಗೆ ಬೆಳಗ್ಗೆ ಹಾಲು ಕಾಯಿಸಿ ಕಾಫಿ ಅಥವಾ ಹಾರ್ಲಿಕ್ಸ್ ಗಳನ್ನು ಮಾಡಲು ಸಮಯ ಇರುವುದಿಲ್ಲ ಹಾಗಿದ್ದಾಗ ನೀವು ನಂದಿನಿ ಕಂಪನಿಯ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ಖರೀದಿಸಿ. ಏಕೆ ಎಂದರೆ ಈ ಹಾಲನ್ನು ಹಾಲಿನ ಪ್ಯಾಕ್ ಮಾಡುವ ಮುಂಚೆ 137 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ 4 ನಿಮಿಷಗಳ ವರೆಗೆ ಕಾಯಿಸಿ ನಂತರ ತಕ್ಷಣವೇ ತಣ್ಣಗೆ ಮಾಡಿರುವುದರಿಂದ ಇದನ್ನು ನೀವು ಕಾಯಿಸದೆ ಬಳಕೆ ಮಾಡಬಹುದು. ಇದರಿಂದ ಯಾವುದೇ ಅಪಾಯ ಇಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಲನ್ನು ಶೇಖರಣೆ ಮಾಡಿರುವುದರಿಂದ ಯಾವುದೇ ಹೊರಗಿನ ಉಷ್ಣಾಂಶದಿಂದಾಗಿ ಹಾಲು ಒಡೆಯುವುದಿಲ್ಲ. ಅದರಿಂದ ನೀವು ಯಾವುದೇ ಭಯ ಇಲ್ಲದೆ ಇದನ್ನು ತೆಗೆದುಕೊಳ್ಳಬಹುದು.

2) ಕಾಯಿಸಿ ಕುಡಿಯುವುದಾದರೆ :- ನೀವು ಹಾಲನ್ನು ಕಾಯಿಸಿಯೇ ಕುಡಿಯಬೇಕು ನಮಗೆ ಕಾಯಿಸದೆ ಇರುವ ಹಾಲು ಬೇಡ ಎನ್ನುವವರದಾರೆ ನೀವು ನಂದಿನಿ ಬ್ರಾಂಡ್ ನ ಯಾವುದೇ ಹಾಲನ್ನು ತೆಗೆದುಕೊಳ್ಳಬಹುದು. ಹಾಲು ಉಕ್ಕಿ ಬರುವ ತನಕ ನಂದಿನಿ ಬ್ರಾಂಡ್ ನ ಎಲ್ಲಾ ಬಣ್ಣದ ಪ್ಯಾಕೆಟ್ ಹಾಲು ಬಳಕೆಗೆ ಉತ್ತಮವಾಗಿದೆ.

3) ಕಾಫಿ ಅಥವಾ ಟೀ ಕುಡಿಯಲು :- ಸಾಮಾನ್ಯವಾಗಿ ದಿನಕ್ಕೆ ಒಂದು ಬಾರಿ ಆದರೂ ಕಾಫಿ ಅಥವಾ ಟೀ ಕುಡಿಯುತ್ತೇವೆ. ಕಾಫಿ ಅಥವಾ ಟೀ ಗೆ ಒಳ್ಳೆಯ ಹಾಲು ಬೇಕಾಗುತ್ತದೆ. ಕೆಲವೊಮ್ಮೆ ಹಾಲು ಚೆನ್ನಾಗಿಲ್ಲ ಎಂದರೆ ಸಹ ಕಾಫಿ ಮತ್ತು ಟೀ ಕುಡಿಯಲು ಸಾಧ್ಯವಿಲ್ಲ. ಅದರಿಂದ ನೀವು ಒಳ್ಳೆಯ ಹಾಲನ್ನು ಖರೀದಿಸಬೇಕು. ನೀವು ಕುಡಿಯುವ ಕಾಫಿ ಅಥವಾ ಟೀ ರುಚಿಯಾಗಿ ಇರಬೇಕು ಎಂದರೆ ನೀವು ನಂದಿನಿ ಬ್ರಾಂಡ್ ನ ಹಸಿರು ಬಣ್ಣದ ಪ್ಯಾಕೆಟ್ ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ತೆಗೆದುಕೊಳ್ಳಿ. ಇದರಿಂದ ನಿಮಗೆ ಕಾಫಿ ಮತ್ತು ಟೀ ಇನ್ನಷ್ಟು ಕುಡಿಯಬೇಕು ಎಂದೆನಿಸುತ್ತದೆ.

4) ಗಟ್ಟಿ ಕಾಫಿ ಕುಡಿಯಬೇಕು ಎಂದರೆ :-

ನಿಮಗೆ ಗಟ್ಟಿ ಹಾಲಿನ ಕಾಫಿ ಬೇಕು ಎನ್ನುವುದಾದರೆ ನಂದಿನಿ ಬ್ರಾಂಡ್ ನ ತುಸು ನೇರಳೆ ಬಣ್ಣದ ಹಾಲಿನ ಪ್ಯಾಕೆಟ್ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ಖರೀದಿಸಿ. ಯಾಕೆಂದರೆ ಈ ಹಾಲು ಪೂರ್ತಿ ಕೆನೆಯ ಅಂಶ ಇರುವ ರೀತಿಯಲ್ಲಿ ಇರುತ್ತದೆ. ಆದರೆ ಇದು ಕೆನೆ ಕಟ್ಟಿಕೊಳ್ಳುವುದಿಲ್ಲ ಯಾಕೆಂದರೆ ಈ ಹಾಲನ್ನು ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ. ಆದ್ದರಿಂದ ನೀವು ಈ ಹಾಲನ್ನು ಖರೀದಿಸಬಹುದು.

5) ಗಟ್ಟಿ ಮೊಸರಿಗೆ :- ಕೆಲವು ಹಾಲಿನಿಂದ ಮೊಸರು ಮಾಡಿದರೆ ನೀರು ನೀರಾಗಿ ಇರುತ್ತದೆ. ಇಲ್ಲವೇ ರುಚಿ ಚೆನ್ನಾಗಿ ಇರುವುದಿಲ್ಲ. ನೀವು ನಂದಿನಿ ಬ್ರಾಂಡ್ ನ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಹಾಲು ತೆಗೆದುಕೊಳ್ಳಿ ಇದು ನಿಮಗೆ ಗಟ್ಟಿ ಮೊಸರು ಮಾಡಬಹುದು. ಇದು ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕ್ ಆಗಿದೆ.

6) ಪಾಯಸ ಅಥವಾ ಸಿಹಿತಿಂಡಿ ಮಾಡಲು :- ಯಾರಾದರೂ ಗೆಸ್ಟ್ ಬರುತ್ತಾರೆ ಅಥವಾ ನಿಮಗೆ ಹಾಲಿನಿಂದ ಮಾಡುವ ಸಿಹಿತಿಂಡಿ ತಿನ್ನಬೇಕು ಎಂಬ ಆಸೆ ಆಗಿದೆ ಎಂದಾದರೆ ನೀವು ನಂದಿನಿ ಬ್ರಾಂಡ್ ನ ತುಸು ನೇರಳೆ ಬಣ್ಣದ ಹಾಲಿನ ಪ್ಯಕ್ ತೆಗ್ದುಕೊಳ್ಳುವುದು ಉತ್ತಮ . ಇದು ಹಾಲಿನ ಸಿಹಿ ತಿಂಡಿ ಮಾಡಲು ಉಪಯುಕ್ತವಾಗಿದೆ. ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ಖರೀದಿಸಿ.

7) ಮಕ್ಕಳಿಗೆ :- ಮನೆಯಲ್ಲಿ ಮಕ್ಕಳು ಇದ್ದರೆ ಯಾವ ಬ್ರಾಂಡ್ ನ ಹಾಲು ಕೊಡಬೇಕು ಅಥವಾ ಯಾವ ಹಾಲು ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶ ನೀಡುತ್ತದೆ ಎಂದು ಯೋಚಿಸುವುದು ಸಹಜ . ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ನೀವು ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್ ತೆಗೆದುಕೊಳ್ಳಿ. ಇದು ಹೊಮೊಜಿನೈಸೆಡ್ ಆಗಿರುತ್ತದೆ. ಜೊತೆಗೆ ನೀವು ಪಾಸ್ಚರೀಕರಿಸಿದ ಹಸುವಿನ ಹಾಲು ಮಕ್ಕಳಿಗೆ ತುಂಬಾ ಒಳ್ಳೆಯದು.

8) ಬೆಳೆಯುವ ಮಕ್ಕಳಿಗೆ :- ಪುಟ್ಟ ಮಕ್ಕಳಂತೆಯೇ ಬೆಳೆಯುವ ಮಕ್ಕಳಿಗೆ ಪೌಷ್ಟಿಕ ಹಾಲು ಬೇಕು. ಮಕ್ಕಳಿಗೆ ನಂದಿನಿಯ ಕಿತ್ತಳೆ ಬಣ್ಣದ ಶುಭಂ ಪ್ಯಾಕೆಟ್ ಅಥವಾ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ಖರೀದಿಸಿ. ಏಕೆಂದರೆ ಇದರಲ್ಲಿ ಮಕ್ಕಳ ಬೆಳವಣಿಗೆ ಬೇಕಾದ ಕೊಬ್ಬಿನಂಶ ಇರುವುದರಿಂದ ಅವರ ನಿತ್ಯದ ಆಟ ಪಾಠಕ್ಕೆ ಹಾಗೂ ಚಟುವಟಿಕೆಗೆ ಹೆಚ್ಚಿನ ಶಕ್ತಿ ನೀಡುತ್ತದೆ.

9) ಹಿರಿಯ ನಾಗರಿಕರಿಗೆ :-

ಮನೆಯಲ್ಲಿ ಹಿರಿಯರು ಇದ್ದರೆ ಅವರಿಗೆ ನಂದಿನಿ ಬ್ರಾಂಡ್ ನ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಉತ್ತಮ ಆಯ್ಕೆ ಆಗಿದೆ. ಇದರಲ್ಲಿ ಹೆಚ್ಚಿನ ಕೊಬ್ಬಿನಂಶ ಇರುತ್ತದೆ. ಇದು ವಯಸ್ಸಾದವರಿಗೆ ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.

11) ಕೊಬ್ಬು ಕರಗಿಸಲು :- ಕೊಬ್ಬು ಕರಗಿಸಲು ನೀವು ಹಾಲು ಕುಡಿಯುವುದನ್ನು ಬಿಡಬಾರದು. ಹಾಲು ಕುಡಿಯುವುದು ಬಿಟ್ಟರೆ ನಿಮ್ಮ ದೇಹಕ್ಕೆ ಪೌಷ್ಟಿಕಾಂಶದ ಕೊರತೆ ಉಂಟಾಗಬಹುದು. ಅದಕ್ಕೇ ನೀವು ಕೊಬ್ಬು ಕರಗಿಸಲು ನಂದಿನಿ ಬ್ರಾಂಡ್ ನ ಹಳದಿ ಬಣ್ಣ ಅಥವಾ ಕಿತ್ತಳೆ ಬಣ್ಣದ ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ಹಾಲು ಬಳಸುವುದು ಉತ್ತಮ.

12) ಫಿಟ್ನೆಸ್ ಗೆ :- ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂದರೆ ನಂದಿನಿ ಬ್ರಾಂಡ್ ನ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕ್ ಹಾಲು ಬಳಸಿ.

13) ಹಸುವಿನ ಹಾಲಿನ ಬಳಕೆಗೆ :- ಹಸುವಿನ ಹಾಲಿನ ಸೇವನೆ ಮಾಡುವವರಿಗೆ ನಂದಿನಿ ಬ್ರಾಂಡ್ ನ ಹಸಿರು ಬಣ್ಣದ ಹೊಮೊಜಿನೈಸೆಡ್ ಹಾಲಿನ ಪ್ಯಾಕ್ ಉತ್ತಮ. ಬೇರೆ ಬಣ್ಣದ ಪ್ಯಾಕ್ ನಲ್ಲಿ ಎಮ್ಮೆ ಹಾಲು ಮತ್ತು ಹಸುವಿನ ಹಾಲು ಮಿಶ್ರಿತ ಆಗಿರುತ್ತದೆ.

14) ಶೇಖರಣೆಗೆ :- ದಿನವೂ ಅಂಗಡಿಗೆ ಹೋಗಿ ಹಾಲು ತರಲು ಸಾಧ್ಯವಿಲ್ಲ ಎಂದರೆ ನೀವು ನಂದಿನಿ ಬ್ರಾಂಡ್ ನ ಗುಡ್ ಲೈಫ್ ಟೆಟ್ರಾ ಪ್ಯಾಕ್ ಖರೀದಿಸಿ. ಇದು 10ದಿನಗಳ ವರೆಗೆ ನಿಮ್ಮ ಕಾಲು ಕೆಡದಂತೆ ಇರಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಪ್ರವಾಸದಲ್ಲಿ ಸಹ ಉಪಯೋಗ ಆಗಲಿದೆ.

ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.

Sharing Is Caring:

Leave a Comment