PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.

ಈಗ ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡಲು ಹಲವಾರು ಆಪ್ಷನ್ ಗಳು ಇವೆ. ಹುಟ್ಟಿದ ಮಗುವಿನಿಂದ ಹಿಡಿದು ಹಿರಿಯ ನಾಗರಿಕರಿಗೂ ಸಹ ಹಣ ಹೂಡಿಕೆ ಮಾಡಲು ಅವಕಾಶಗಳು ಹೇರಳವಾಗಿ ಇವೆ. ಅದರಲ್ಲಿಯೂ ಹೆಣ್ಣು ಮಗುವಿನ ಭವಿಷ್ಯ ನಿಧಿಗೆ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಮಗುವಿನ ಶಿಕ್ಷಣಕ್ಕೆ ಹಾಗೂ ಮದುವೆಗೆ ಹಾಗೂ ಅವರ ಜೀವನದ ಕಷ್ಟ ಸಮಯದಲ್ಲಿ ಅವರಿಗೆ ಹಣ ಸಿಗಲಿ ಎಂಬ ಉದ್ದೇಶದಿಂದ ಪಾಲಕರು ಹಣ ಹೂಡಿಕೆ ಮಾಡುತ್ತಾರೆ. ಹೆಣ್ಣು ಮಕ್ಕಳ ಅಥವಾ ಗಂಡು ಮಗುವಿನ ತಂದೆ ತಾಯಿಯರಿಗೆ ಅನುಕೂಲ ಆಗುವಂತೆ ಭಾರತದಲ್ಲಿ ಎಂದೇ ಎರಡು ಹೂಡಿಕೆಯ ಯೋಜನೆಗಳು ಇವೆ. ಒಂದು ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಇನ್ನೊಂದು ಸಾರ್ವಜನಿಕ ಭವಿಷ್ಯ ನಿಧಿ. ಎರಡು ಯೋಜನೆಗಳು ಇವ ಪ್ರಚಲಿತದಲ್ಲಿ ಇವೆ. ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೆಚ್ಚಿನ ಲಾಭ ಪಡೆಯುತ್ತೀರಿ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಸುಕನ್ಯಾ ಸಮೃದ್ಧಿ ಯೋಜನೆ (SSF ) :- ಈ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎಂದೇ ಇರುವ ಕೇಂದ್ರ ಸರ್ಕಾರದ ಯೋಜನೆ ಆಗಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕೆ ದೀರ್ಘಾವಧಿ ಹೂಡಿಕೆ ಮಾಡಲು ಬಯಸುವ ಪಾಲಕರಿಗೆ ಇದು ಉತ್ತಮ ಯೋಜನೆ ಆಗಿದೆ. ಈಗಾಗಲೇ ಭಾರತದಲ್ಲಿ ಈ ಯೋಜನೆ ಬಹಳ ಪ್ರಚಲಿತದಲ್ಲಿ ಇದೆ. ಈ ಯೋಜನೆಯ ಹೂಡಿಕೆಯ ಮೇಲೆ ಉತ್ತಮ ಬಡ್ಡಿ ಸಹ ಸಿಗುತ್ತದೆ. ಈ ಯೋಜನೆಯಲ್ಲಿ ನೀವು 15 ವರ್ಷಗಳ ಕಾಲ ನಿರಂತರ ಹೂಡಿಕೆ ಮಾಡಿದರೆ ನಿಮ್ಮ ಮಗು 21 ವರ್ಷಕ್ಕೆ ಕಾಲಿಟ್ಟಾಗ ನಿಮಗೆ ಮೆಚ್ಯೂರಿಟಿ ಹಣ ಸಿಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆ ಆಗಿರುವ ಕಾರಣದಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಗಿದೆ. ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

SSY ನಲ್ಲಿ ಹೂಡಿಕೆ ಏಷ್ಟು ಹೂಡಿಕೆ ಮಾಡಬೇಕು?

ಈ ಯೋಜನೆಯಲ್ಲಿ ಬಡವರು ಸಹ ಹೂಡಿಕೆ ಮಾಡಬಹುದು. ಯಾಕೆಂದರೆ ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 250 ರೂಪಾಯಿ ಹೂಡಿಕೆ ಮಾಡುವ ಅವಕಾಶ ಇದೆ ಹಾಗೂ ಗರಿಷ್ಠ ಹೂಡಿಕೆಯ ಮೊತ್ತ 1,50,000 ರೂಪಾಯಿ ಆಗಿರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿಂಗಳಿಗೆ ಹಾಗೂ ವರ್ಷಕ್ಕೆ ಒಮ್ಮೆ ಹೂಡಿಕೆ ಮಾಡಬಹುದು. ಅದರಿಂದ ಮಧ್ಯಮ ಮತ್ತು ಬಡವರ್ಗದ ಜನರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸುಲಭ ಆಗುತ್ತದೆ.

ಬಡ್ಡಿದರದ ಮಾಹಿತಿ :- ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತಕ್ಕೆ ಶೇಕಡಾ 8.2% ಬಡ್ಡಿದರವನ್ನು ನೀಡಲಾಗುತ್ತದೆ.

ಯೋಜನೆಯ ಲೆಕ್ಕಾಚಾರ ಹೀಗಿದೆ :- ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮೊತ್ತ 50,000 ರೂಪಾಯಿ ವಾರ್ಷಿಕ ಹೂಡಿಕೆ ಮಾಡಿದರ.  ನೀವು ನಿರಂತರವಾಗಿ 15 ವರ್ಷಗಳ ಕಾಲ ನಿರಂತರ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆಯ ಮೊತ್ತವು 7.5 ಲಕ್ಷ ರೂಪಾಯಿ ಆಗುತ್ತದೆ. ಈಗಿನ ಬಡ್ಡಿ ದರದ ಪ್ರಕಾರ ಲೆಕ್ಕ ಹಾಕಿದರೆ ನಿಮಗೆ 15.77 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ ಮತ್ತು ಮೆಚ್ಯೂರಿಟಿ ಮೊತ್ತವು 23.27 ಲಕ್ಷ ರೂಪಾಯಿ ಆಗಿರುತ್ತದೆ.

ಇದನ್ನೂ ಓದಿ: ಎಟಿಎಂ ನಿಂದ ಹಣ ಡ್ರಾ ಮಾಡುವ ಮೊದಲು ಎಚ್ಚರ; ಬೇಕಾ ಬಿಟ್ಟಿ ಹಣ ಡ್ರಾ ಮಾಡುದ್ರೆ ಶುಲ್ಕ ಹೆಚ್ಚಳ

ಸಾಮಾನ್ಯ ಭವಿಷ್ಯ ನಿಧಿ ಯೋಜನೆ(PPF):-

ಈ ಯೋಜನೆಯಲ್ಲಿ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಎಂಬುದಿಲ್ಲ. ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ 15ವರ್ಷಗಳ ವರೆಗೆ ಹೂಡಿಕೆ ಮಾಡಬಹುದು. ನಿಮಗೆ ಇಚ್ಛೆ ಇದ್ದರೆ ಇನ್ನೂ 5 ವರ್ಷಗಳ ಕಾಲ ವಿಸ್ತರಣೆ ಮಾಡಲು ಅವಕಾಶ ಇದೆ. ದೀರ್ಘಾವಧಿಯ ವರೆಗೆ ಹಣ ಹೂಡಿಕೆ ಮಾಡಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ನೀವು ಬ್ಯಾಂಕ್ನಲ್ಲಿ ಹೂಡಿಕೆ ಮಾಡಬಹುದಾಗಿದೆ.

PPF ನಲ್ಲಿ ಹೂಡಿಕೆ ಏಷ್ಟು ಹೂಡಿಕೆ ಮಾಡಬೇಕು?: ನೀವು ಸಾಮಾನ್ಯ ಭವಿಷ್ಯ ನಿಧಿ ಯೋಜನೆ(PPF) ನಲ್ಲಿ ವಾರ್ಷಿಕವಾಗಿ ಕನಿಷ್ಠ ಹೂಡಿಕೆಯ ಮೊತ್ತ 500 ರೂಪಾಯಿ ಹಾಗೂ ಗರಿಷ್ಠ ಹೂಡಿಕೆಯ ಮೊತ್ತ 1,50,000 ರೂಪಾಯಿ ಆಗಿರುತ್ತದೆ. ನೀವು ವಾರ್ಷಿಕವಾಗಿ ಒಮ್ಮೆ ಹಾಗೂ ಪ್ರತಿ ತಿಂಗಳು ಹೂಡಿಕೆ ಮಾಡುವ ಅವಕಾಶ ಇದೆ.

ಸಾಮಾನ್ಯ ಭವಿಷ್ಯ ನಿಧಿ ಯೋಜನೆಯ(PPF) ಬಡ್ಡಿದರದ ಮಾಹಿತಿ:- ನಿಮಗೆ ಸಾಮಾನ್ಯ ಭವಿಷ್ಯ ನಿಧಿ ಯೋಜನೆ(PPF) ಯಲ್ಲಿ ನಿಮ್ಮ ಹೂಡಿಕೆಯ ಮೊತ್ತದ ಮೇಲೆ ಶೇಕಡಾ 7.1% ಬಡ್ಡಿದರ ಸಿಗುತ್ತದೆ. 

ಸಾಮಾನ್ಯ ಭವಿಷ್ಯ ನಿಧಿ ಯೋಜನೆಯ(PPF) ಯೋಜನೆಯ ಲೆಕ್ಕಾಚಾರ ಹೀಗಿದೆ :- ನೀವು ತಿಂಗಳಿಗೆ 5000 ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ ಹೂಡಿಕೆ ಮೊತ್ತ 60,000 ರೂಪಾಯಿ ಆಗಿರುತ್ತದೆ. ನೀವು 15 ವರ್ಷಗಳ ಅವಧಿಗೆ ನಿರಂತರ ಹೂಡಿಕೆಯನ್ನು ಮಾಡಿದರೆ ನಿಮ್ಮ ಹೂಡಿಕೆಯ ಒಟ್ಟು ಮೊತ್ತ 9 ಲಕ್ಷ ರೂಪಾಯಿ ಆಗುತ್ತದೆ. ಪ್ರಸ್ತುತ ಬಡ್ಡಿದರದ ಪ್ರಕಾರ ಲೆಕ್ಕಹಾಕಿದರೆ ನಿಮಗೆ ಸಿಗುವ ಬಡ್ಡಿದರ 7,27,284 ರೂಪಾಯಿ ಆಗುತ್ತದೆ. ನಿಮಗೆ ಸಿಗುವ ಹಣ 16,27,284 ರೂಪಾಯಿಗಳು.

PPF ಹಾಗೂ SSF ಯಾವುದು ಬೆಸ್ಟ್ :-

ಎರಡು ಯೋಜನೆಗಳು ಹೂಡಿಕೆಗೆ ಉತ್ತವಾಗಿದೆ. ನಿಮಗೆ ವಾರ್ಷಿಕವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದಾದರೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಯಾಕೆಂದರೆ ಈ ಯೋಜನೆಯಲ್ಲಿ ಸಾಮಾನ್ಯ ಭವಿಷ್ಯ ನಿಧಿ ಯೋಜನೆಗಿಂತ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ಇದೆ. ಹಾಗೂ ಬಡ್ಡಿದರ ಸಹ ಈ ಯೋಜನೆಯಲ್ಲಿ ಜಾಸ್ತಿ ಇದೆ. ಆದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಗುವಿಗೆ 21 ವರ್ಷ ಆದ ಬಳಿಕವೇ ನಿಮಗೆ ಹಣ ಸಿಗುತ್ತದೆ. ಆದರೆ ಸಾಮಾನ್ಯ ಭವಿಷ್ಯ ನಿಧಿ ಯೋಜನೆಯಲ್ಲಿ 15 ವರ್ಷಗಳ ಹೂಡಿಕೆಯ ಅವಧಿ ಮುಗಿದ ಬಳಿಕ ನಿಮಗೆ ಹಣ ಸಿಗುತ್ತದೆ. ನಿಮಗೆ ಉಳಿದಂತೆ ಎರಡು ಯೋಜನೆಗೂ ಸಹ ತೆರಿಗೆ ವಿನಾಯಿತಿ ಹಾಗೂ ಇನ್ನಿತರ ಪ್ರಯೋಜನಗಳು ಸಮನಾಗಿ ಇದೆ. ನೀವು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೂ ಸಹ ಕನಿಷ್ಠ ಮೊತ್ತದ ಹೂಡಿಕೆ ಲಭ್ಯ ಇರುವ ಕಾರಣದಿಂದ ಬಡವರಿಗೆ ಹಾಗೂ ಮಾಧ್ಯಮ ವರ್ಗದ ಜನರಿಗೆ ಇದು ಹೂಡಿಕೆಗೆ ಉತ್ತಮವಾಗಿದೆ.

ಇದನ್ನೂ ಓದಿ: ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ನೆನಪಿಡಿ

Sharing Is Caring:

Leave a Comment