ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ…

ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಯಾರ ಸಹಕಾರವು ಇಲ್ಲದೆ ಸ್ವಾವಲಂಬಿ ಜೀವನ ನಡೆಸಲು, ಜೊತೆಗೆ ಸರ್ಕಾರ ಮಹಿಳೆಯರನ್ನ ಸಶಾಕ್ತರನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನ ಜಾರಿಗೊಳಿಸುತ್ತಿರುತ್ತದೆ. ಅದರಲ್ಲಿ ಮುಖ್ಯವಾಗಿ ಉದ್ಯೋಗಿನಿ ಯೋಜನೆಯು ಸರ್ಕಾರವು ಮಹಿಳೆಯರೇ ಗಂತಲೇ ಜಾರಿಗೆ ತಂದಿರುವ ಯೋಜನೆಯಾಗಿದೆ. ಹೌದು ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸರ್ಕಾರವು ಸಹಾಯಧನವನ್ನು ನೀಡಲು ಮೂರು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು ಜಾರಿಗೊಳಿಸಿದ ಯೋಜನೆ ಇದಾಗಿದೆ. ಇದಷ್ಟೇ ಅಲ್ಲದೆ ಮಹಿಳೆಯರಿಗೆ ಸಬ್ಸಿಡಿ ಕೂಡ ನೀಡಲಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮಿಂಚುತ್ತಿದ್ದಾರೆ.

WhatsApp Group Join Now
Telegram Group Join Now

ವ್ಯಾಪಾರವನ್ನೂ ಮಾಡುತ್ತಿದ್ದಾರೆ. ಆದರೆ, ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರೂ, ಕೆಲವು ಮಹಿಳೆಯರು ಹಣಕಾಸಿನ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸುತ್ತಾರೆ. ಅಂತಹವರಿಗೆ ಕೇಂದ್ರ ಸರ್ಕಾರ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಅದುವೇ ಉದ್ಯೋಗಿನಿ ಯೋಜನೆ. ಈ ಯೋಜನೆಯ ಮೂಲಕ ಮಹಿಳೆಯರು 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಈ ಯೋಜನೆಗೆ ಬೇಕಾದ ಅರ್ಹತೆಗಳೇನು? ಅಗತ್ಯ ದಾಖಲೆಗಳೇನು? ಇದೆಲ್ಲಾದಕ್ಕಿಂತ ಮುಖ್ಯವಾಗಿ ಈ ಉದ್ಯೋಗಿನಿ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು, ಜೊತೆಗೆ ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಮತಿ ಇಲ್ಲ. ಹಾಗಾದ್ರೆ ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿಯನ್ನ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಡ್ಡಿ ರಹಿತ ಸಾಲದ ಜೊತೆಗೆ ಸಿಗಲಿದೆ ಸಬ್ಸಿಡಿ

ಹೌದು ಇದೀಗ ಬಡ ಮತ್ತು ಅನಕ್ಷರಸ್ಥ ಹಿನ್ನೆಲೆಯ ಮಹಿಳೆಯರಿಗೆ ಈ ಯೋಜನೆಯ ಮೂಲಕ ಸರ್ಕಾರ ಬೆಂಬಲ ನೀಡುತ್ತದೆ. ಈ ಯೋಜನೆಯು ವ್ಯಾಪಾರದಲ್ಲಿ ಮಹಿಳೆಯರಿಗೆ ಸಹಾಯ ಮಾಡಲು ಕೌಶಲ್ಯ ತರಬೇತಿಯನ್ನು ನೀಡುತ್ತದೆ. ಅಂಕಿ-ಅಂಶಗಳ ಪ್ರಕಾರ ಇದುವರೆಗೆ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದು, ವ್ಯಾಪಾರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಯೋಜನೆಯಡಿ ಮಹಿಳೆಯರು 3 ಲಕ್ಷದವರೆಗೆ ಸಾಲ ಪಡೆಯಬಹುದು. ಅಲ್ಲದೇ ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಸಂಪೂರ್ಣ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಇತರ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಶೇಕಡಾ 10 ರಿಂದ 12 ರಷ್ಟು ಬಡ್ಡಿಗೆ ಸಾಲ ನೀಡಲಾಗುತ್ತದೆ. ಈ ಬಡ್ಡಿಯು ಬ್ಯಾಂಕ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಅಲ್ಲದೇ, ಕುಟುಂಬದ ವಾರ್ಷಿಕ ಆದಾಯವನ್ನು ಅವಲಂಬಿಸಿ ಶೇಕಡಾ 30 ರವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಇನ್ನು ಈ ಹಣದಲ್ಲಿ ಸರಕಾರ ಸೂಚಿಸುವ 88 ಬಗೆಯ ವ್ಯವಹಾರಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಆರ್ಥಿಕವಾಗಿ ನೆಲೆಯೂರಬಹುದು. ಮುಖ್ಯವಾಗಿ ಅಂಗವಿಕಲರು ಮತ್ತು ವಿಧವೆಯರಿಗೆ ಸಾಲದ ಮಿತಿ ಇಲ್ಲ. ಅವರ ವಿದ್ಯಾರ್ಹತೆ ಮತ್ತು ವ್ಯವಹಾರವನ್ನು ಅವಲಂಬಿಸಿ ಅವರು ಹೆಚ್ಚಿನ ಸಾಲಗಳನ್ನು ಪಡೆಯಬಹುದು. ಹೀಗಾಗಿ ತಮ್ಮದೇ ಸ್ವಂತ ಉದ್ಯಮ ಮಾಡಬೇಕು ಎಂದು ಆಸೆ ಇರುವ ಹೆಣ್ಣುಮಕ್ಕಳಿಗೆ, ಈಗಾಗಲೇ ಉದ್ಯಮ ಶುರು ಮಾಡಿರುವ ಮಹಿಳೆಯರಿಗೆ ಉತ್ತೇಜನ ನೀಡಲು, ಪ್ರೋತ್ಸಾಹ ನೀಡಲು ಸರ್ಕಾರವು ಸಾಲದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯಬಹುದು.

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 11 ಸಾವಿರ ರೂಪಾಯಿ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಯಲ್ಲಿ ಎಸ್ಸಿ ಎಸ್ಟಿ ಹಾಗೂ ಬೇರೆ ವರ್ಗದ ಮಹಿಳೆಯರಿಗೆ ವಿವಿಧ ರೀತಿಯ ಸಹಾಯಧನ ಸಿಗಲಿದೆ. ಇದಕ್ಕಾಗಿ ಸಿಗುವ ಸಹಾಯಧನದ ಬಗ್ಗೆ ಹೇಳುವುದಾದರೆ, ಎಸ್ಸಿ ಎಸ್ಟಿ ಮಹಿಳೆಯರಿಗೆ ಆದಾಯದ ಮಿತಿ 2 ಲಕ್ಷ ರೂಪಾಯಿಗಳು, ಇಲ್ಲಿ ನಿಮಗೆ ಘಟಕದ ವೆಚ್ಚಕ್ಕೆ 1 ಲಕ್ಷ ಇಂದ 3 ಲಕ್ಷದವರೆಗು ಸಹಾಯ ಸಿಗುತ್ತದೆ. ಈ ಮೊತ್ತದಲ್ಲಿ 50% ಸಹಾಯಧನ ಆಗಿರುತ್ತದೆ. ಇನ್ನು ಓಬಿಸಿ ವರ್ಗದವರಿಗೆ ಆದಾಯದ ಮಿತಿ 1.50 ಲಕ್ಷಗಳು, ಘಟಕದ ವೆಚ್ಚವಾಗಿ 3 ಲಕ್ಷದವರೆಗು ಸಹಾಯ ನೀಡಲಾಗುತ್ತದೆ. ಇದರಲ್ಲಿ 30% ಸಹಾಯಧನ ಆಗಿರುತ್ತದೆ. ಇನ್ನು ಯೋಜನೆಗೆ ಅರ್ಜಿ ಸಲ್ಲಿಸುವಂತವರು ಮುಖ್ಯವಾಗಿ ಭಾರತೀಯರಾಗಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹1,50,000 ಮೀರಬಾರದು. ಇನ್ನು ಮುಖ್ಯವಾಗಿ ಅರ್ಜಿದಾರರಿಗೆ ಅಗತ್ಯವಿರುವ ಸಾಲದ ಮೊತ್ತವು ₹ 3,00,000 ಮೀರಬಾರದು. ಜೊತೆಗೆ ಉದ್ಯೋಗಿನಿ ಸಾಲದ ಮೇಲೆ ಯಾವುದೇ ಭದ್ರತೆಯ ಅಗತ್ಯವಿಲ್ಲ. ಕುಟುಂಬದ ವಾರ್ಷಿಕ ಆದಾಯ, ಅಂಗವಿಕಲರು ಅಥವಾ ವಿಧವೆಯರಿಗೆ ವಯಸ್ಸಿನ ಮಿತಿಯಿಲ್ಲ. ಹೀಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ತಮ್ಮ ಕ್ರೆಡಿಟ್ ಸ್ಕೋರ್ ಮತ್ತು CIBIL ಸ್ಕೋರ್ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ಈ ಹಿಂದೆ ಯಾವುದೇ ಸಾಲ ಪಡೆದು ಮರುಪಾವತಿ ಮಾಡದೇ ಇದ್ದಲ್ಲಿ ಸಾಲ ನೀಡುವುದಿಲ್ಲ. ಇನ್ನು ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಆಧಾರ್ ಕಾರ್ಡ್, ಅರ್ಜಿ ಸಲ್ಲಿಸುವ ಮಹಿಳೆಯ ಜನ್ಮ ಪ್ರಮಾಣಪತ್ರ
ಬಡತನ ರೇಖೆಗಿಂತ ಕೆಳಗಿರುವವರು ಪಡಿತರ ಚೀಟಿಯ ಪ್ರತಿಯನ್ನು ಲಗತ್ತಿಸಬೇಕು. ಅಲ್ದೇ ಆದಾಯ ಪರಿಶೀಲನೆ ಪತ್ರ, ನಿವಾಸದ ಪುರಾವೆ,
ಜಾತಿ ದೃಢೀಕರಣ ಪ್ರಮಾಣಪತ್ರ, ಬ್ಯಾಂಕ್ ಖಾತೆ, ಅಗತ್ಯ ಇರುವ ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಹೋಗಿ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಬಹುದು. ಹೌದು ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಫಾರ್ಮ್‌ನಲ್ಲಿ ನಮೂದಿಸಲಾದ ಎಲ್ಲಾ ದಾಖಲೆಗಳ ಫೋಟೋಕಾಪಿಯನ್ನು ಲಗತ್ತಿಸಿ, ನಂತರ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಬ್ಯಾಂಕ್‌ಗೆ ಸಲ್ಲಿಸಿ, ಅರ್ಜಿ ಸಲ್ಲಿಸಿದ ನಂತರ, ಸಾಲ ಮಂಜೂರಾತಿಗಾಗಿ ನೀವು ನಿಯಮಿತವಾಗಿ ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ. ಹೀಗಾಗಿ ನಿಮಗೂ ಕೂಡ ಹಣದ ಅವಶ್ಯಕತೆ ಇದ್ರೆ, ಹೊಸದಾಗಿ ವ್ಯಾಪಾರ, ಅಥವಾ ಉದ್ಯೋಗ ಆರಂಭಿಸಬೇಕು ಅಂದ್ರೆ ನೀವು ಸರ್ಕಾರದಿಂದ ಸಿಗ್ತಿರುವ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದು.

ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.

Sharing Is Caring:

Leave a Comment