ರಾಜ್ಯ ಸರ್ಕಾರವು ಅಧರಿಕಾರಕ್ಕೆ ಬರುವ ಮೊದಲು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಜನರಿಗೆ ಪ್ರಚಾರದ ವೇಳೆಯಲ್ಲಿಯೇ ಹೇಳಿತ್ತು. ಅದಾದ ನಂತರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು. ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದೆ ತರುತ್ತೇವೆ ಎಂದು ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಹಾಗೂ ಶಕ್ತಿ ಯೋಜನೆ ಇದರಂತೆಯೇ 5 ಯೋಜನೆಗಳನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಯಶಸ್ವಿ ಆಯ್ತು. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಫಲಿತಾಂಶ ಗಳಿಸಿ ಸೋತಿರುವ ಕಾಂಗ್ರೆಸ್ ಪಕ್ಷವು ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿ ಎಲ್ಲಾ ಯೋಜನೆಗಳನ್ನು ಮುಂದುವರೆಸಿದೆ. ಈಗ ಯುವ ನಿಧಿ ಯೋಜನೆಯ ಬಗ್ಗೆ ಹೊಸದಾಗಿ ಅಪ್ಡೇಟ್ ಬಿಡುಗಡೆ ಮಾಡಿದೆ.
ಯುವನಿಧಿ ಯೋಜನೆಯ ಹೊಸ ಅಪ್ಡೇಟ್ ಏನು?: ಈ ಹಿಂದೆ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಅಂಕಪ್ರತಿಗಳನ್ನು ಹಾಗೂ ಉದ್ಯೋಗ ಮಾಡುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದರೆ ಸಾಕಾಗಿತ್ತು. ಆದರೆ ಈಗ ಹೊಸದಾಗಿ ನಿಯಮವನ್ನು ಬದಲಾಯಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಹಣ ಸಿಗಬೇಕು ಎಂದು ಸರ್ಕಾರವು ಮಹತ್ವದ ಆದೇಶ ಬಿಡುಗಡೆ ಮಾಡಿದೆ. ಅದೇನೆಂದರೆ ಯೋಜನೆಯ ಹಣವನ್ನು ಪಡೆಯಲು ಫಲಾನುಭವಿಗಳು ತಮ್ಮ ಮಾರ್ಕ್ಸ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಗಳ ಮಾಹಿತಿಯನ್ನು ನೇರವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸಬೇಕು. ಅಲ್ಲಿ ನಿಮ್ಮ ಎಲ್ಲ ಮಾಹಿತಿಗಳನ್ನು ಪರಿಶೀಲನೆ ಮಾಡಿದ ನಂತರ ನೀವು ಯುವನಿಧಿ ಯೋಜನೆಯ ಫಲಾನುಭವಿ ಆಗುತ್ತಿರಿ ಒಂದು ವೇಳೆ ನೀವು ಆನ್ಲೈನ್ ನಲ್ಲಿ ಒದಗಿಸಿದ ಮಾಹಿತಿ ಸುಳ್ಳಾಗಿದ್ದರೆ ನಿಮಗೆ ಯೋಜನೆಯ ಸಹಾಯಧನ ಬರುವುದಿಲ್ಲ. ಹಾಗೂ ಉದ್ಯೋಗ ಸಿಕ್ಕಿದರೂ ನೀವು ಈ ಯೋಜನೆಯ ಹಣ ಪಡೆಯುವುದು ತಿಳಿದರೆ ನಿಮಗೆ ಸರ್ಕಾರವು ದಂಡ ವಿಧಿಸಲಿದೆ.
ಪ್ರತಿ ತಿಂಗಳು 25ನೇ ತಾರೀಖಿನ ಒಳಗೆ ಸ್ವಯಂ ಘೋಷಣೆ ಪತ್ರ ನೀಡಬೇಕು:-
ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಪ್ರತಿ ತಿಂಗಳು ಯಾವುದೇ ರೀತಿಯ ಉನ್ನತ ಶಿಕ್ಷಣ ಪಡೆಯುತ್ತಿಲ್ಲ ಅಥವಾ ಯಾವುದೇ ಜಾಬ್ ಗೆ join ಆಗಿಲ್ಲ ನಾನು ನಿರುದ್ಯೋಗಿ ಎಂದು ಸ್ವಯಂ ಘೋಷಣೆ ಪತ್ರ ನೀಡಬೇಕು. ಸ್ವಯಂ ಘೋಷಣೆ ಪತ್ರ ನೀಡದ ಅರ್ಜಿದಾರರಿಗೆ ಯುವನಿಧಿ ಯೋಜನೆಯ ಹಣ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯುವನಿಧಿ ಯೋಜನೆಯಲ್ಲಿ ಸಿಗುವ ಸಹಾಯಧನ ಏಷ್ಟು?: ಯುವನಿಧಿ ಯೋಜನೆಯಲ್ಲಿ ಡಿಗ್ರಿ ಪಾಸ್ ಆಗಿ 6 ತಿಂಗಳಾದರೂ ಉದ್ಯೋಗ ಸಿಗದವರಿಗೆ ತಿಂಗಳಿಗೆ 3000 ರೂಪಾಯಿ ನೀಡಲಾಗುತ್ತದೆ. ಡಿಪ್ಲೊಮಾ ಮುಗಿಸಿದವ ನಿರುದ್ಯೋಗಿ ಯುವಕ ಯುವತಿಯರಿಗೆ ತಿಂಗಳಿಗೆ 1,500 ರೂಪಾಯಿ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಸಹಾಯಧನವನ್ನು ಫಲಾನುಭವಿಗಳಿಗೆ 2 ವರ್ಷಗಳ ಕಾಲ ಮಾತ್ರ ನೀಡಲಾಗುತ್ತದೆ. ಯಾವುದೇ ಸಮಯದಲ್ಲಿ ಉದ್ಯೋಗ ದೊರೆತರೆ ಅಥವಾ ಉನ್ನತ ಶಿಕ್ಷಣಕ್ಕೆ ಹೋದರೆ ಈ ಯೋಜನೆಯ ಹಣ ಬರುವುದು ನಿಲ್ಲುತ್ತದೆ. ಜೊತೆಗೆ 2 ವರ್ಷಗಳ ಅವಧಿಯಲ್ಲಿ ಯಾವುದೇ ಉದ್ಯೋಗ ದೊರೆಯದೆ ಇದ್ದರೆ ಸಹ ನಿಮಗೆ ಈ ಯೋಜನೆಯ ಹಣ ಬರುವುದಿಲ್ಲ. 2022-23ನೇ ಸಾಲಿನಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಮುಗಿಸಿದವರು ಅಥವಾ ಈ ವರ್ಷ ಡಿಗ್ರಿ ಅಥವಾ ಡಿಪ್ಲೊಮಾ ಮುಗಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ ಬರೋಬ್ಬರಿ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ..
ಇದನ್ನೂ ಓದಿ: ನಿಮಗೆ ಡಿಗ್ರಿ ಆಗಿದೆಯೇ? ಕೇಂದ್ರ ಸರ್ಕಾರ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಲೇ ಅರ್ಜಿ ಸಲ್ಲಿಸಿ.